ನವದೆಹಲಿ: ಸರ್ವೇ ಆಫ್ ಇಂಡಿಯಾ 250 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಗುರುವಾರ ವಜ್ರ (ವಿಸಿಟಿಂಗ್ ಅಡ್ವಾನ್ಸ್ಡ್ ಜಾಯಿಂಟ್ ರಿಸರ್ಚ್-ಫಾರ್ ಫ್ಯಾಕಲ್ಟಿ ಸ್ಕೀಮ್ ಆಫ್ ಸೈನ್ಸ್ ಆಂಡ್ ಎಂಜಿನಿಯರಿಂಗ್ ರಿಸರ್ಚ್ ಬೋರ್ಡ್)ಗೆ ಚಾಲನೆ ನೀಡಿದೆ.ಅಲ್ಲದೇ ಸ್ಮರಣಾರ್ಥ ಅಂಚಿ ಚೀಟಿಯನ್ನೂ ಬಿಡುಗಡೆಗೊಳಿಸಿದೆ.
ಅತ್ಯುತ್ತಮ ಜಾಗತಿಕ ಮನಸ್ಸುಗಳನ್ನು ಭಾರತಕ್ಕೆ ಬರುವಂತೆ ಮಾಡಿ ಆ ಮೂಲಕ ಭಾರತೀಯ ಸಂಸ್ಥೆಗಳ ಜಾಗತಿಕ ರ್ಯಾಂಕಿಂಗ್ನ್ನು ಉತ್ತೇಜಿಸುವ ಆಶಯವನ್ನು ಈ ಪೋರ್ಟಲ್ ಹೊಂದಿದೆ ಎಂದು ಸಚಿವ ಡಾ.ಹರ್ಷವರ್ಧನ್ ತಿಳಿಸಿದ್ದಾರೆ.
ಈ ಯೋಜನೆಯಡಿ ವಿಸಿಟಿಂಗ್ ಫ್ಯಾಕಲ್ಟಿ ಕೈಗೊಂಡ ರಿಸರ್ಚ್ ಕಾರ್ಯಗಳು ಭಾರತಕ್ಕೂ ಪ್ರಸ್ತುತವಾಗಿದೆ. ಹಿಂದೆ ನಾವು ಬ್ರೈನ್ ಡ್ರೈನ್ ಸಮಸ್ಯೆ ಹೊಂದಿದ್ದೆವು, ಅದನ್ನೀಗ ನಾವು ಬ್ರೈನ್ ಗೇನ್ಗೆ ಪರಿವರ್ತನೆಗೊಳಿಸುತ್ತಿವೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.