ನವದೆಹಲಿ: ಅರಬ್ ರಾಷ್ಟ್ರಗಳಿಂದ ನಿಷೇಧಕ್ಕೊಳಗಾಗಿರುವ ಕತಾರ್ ರಾಷ್ಟ್ರದಿಂದ ತಾಯ್ನಾಡಿಗೆ ವಾಪಾಸ್ಸಾಗಲು ಬಯಸುವ ಭಾರತೀಯರಿಗಾಗಿ ವಿಶೇಷ ವಿಮಾನಗಳನ್ನು ಹಾರಾಡಿಸಲು ಕೇಂದ್ರ ನಿರ್ಧರಿಸಿದೆ.
ಜೂನ್ 25ರಿಂದ ಜುಲೈ 8ರವರೆಗೆ ಕೇರಳ ಮತ್ತು ದೋಹಾ ನಡುವೆ ವಿಶೇಷ ವಿಮಾನಗಳನ್ನು ಹಾರಾಡಿಸಲಿದ್ದೇವೆ. ಇದಕ್ಕಾಗಿ 186 ಸೀಟುಗಳ ಬೋಯಿಂಗ್ 737ನ್ನು ಬಳಸಲಿದ್ದೇವೆ. ಜೆಟ್ ಏರ್ವೇಸ್ ಮುಂಬಯಿ ಮತ್ತು ದೋಹಾ ನಡುವೆ ಹೆಚ್ಚುವರಿ ವಿಮಾನಗಳನ್ನು ಹಾರಾಡಿಸಲಿದೆ. ಇದು 168 ಸೀಟುಗಳ ಬಿ-737 ವಿಮಾನ ಬಳಸಲಿದೆ ಎಂದು ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ.
ಭಾರತಕ್ಕೆ ವಾಪಾಸ್ಸಾಗಲು ಬಯಸುವ ಆದರೆ ಟಿಕೆಟ್ ಬುಕ್ ಮಾಡಲು ವಿಫಲರಾಗುತ್ತಿರುವ ಕತಾರ್ನಲ್ಲಿನ ಭಾರತೀಯರಿಗಾಗಿ ಹೆಚ್ಚುವರಿ ವಿಮಾನವನ್ನು ಹಾರಾಡಿಸುವ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಿಮಾನಯಾನ ಸಚಿವ ಎ.ಗಜಪತಿ ರಾಜು ಅವರೊಂದಿಗೆ ಮಾತುಕತೆ ನಡೆಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.