ನವದೆಹಲಿ: ಪ್ರಯಾಣಿಕರಿಗೆ ವಿಶ್ವದರ್ಜೆಯ ಸೌಲಭ್ಯ ಮತ್ತು ಪ್ರಯಾಣ ಅನುಭವವನ್ನು ನೀಡುವ ಸಲುವಾಗಿ ಭಾರತೀಯ ರೈಲ್ವೇಯು ಉತ್ತಮ ಒಳಾಂಗಣ ವ್ಯವಸ್ಥೆ ಮತ್ತು ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿರುವ 40 ಸಾವಿರ ಕೋಚ್ಗಳನ್ನು ರೈಲ್ವೇಗೆ ಅಳವಡಿಸಲು ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 8 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಲಿದೆ.
ಅಪಘಾತಗಳ ಸಂದರ್ಭದಲ್ಲಿ ರೈಲುಗಳು ಓವರ್ ಟರ್ನ್ ಆಗುವುದನ್ನು ತಡೆಗಟ್ಟುವ ಅತ್ಯುತ್ತಮ ಸಾಮರ್ಥ್ಯದ ಕಪ್ಲರ್ಸ್ ಸೇರಿದಂತೆ ಹಲವಾರು ಸುರಕ್ಷಿತ ಕ್ರಮಗಳು ಈ ಕೋಚ್ಗಳಲ್ಲಿ ಇರಲಿದೆ.
ಒಳಾಂಗಣಗಳನ್ನು ಅಭಿವೃದ್ಧಿಪಡಿಸಲಾಗಿರುತ್ತದೆ, ಆಸನ ವ್ಯವಸ್ಥೆಗಳನ್ನು ಉತ್ತಮ ಪಡಿಸಲಾಗಿರುತ್ತದೆ ಮತ್ತು ಬಯೋ ಟಾಯ್ಲೆಟ್ ವ್ಯವಸ್ಥೆ ಇದರಲ್ಲಿ ಇರಲಿದೆ.
ಎಲ್ಲಾ ವಿಧದ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿರುವ ತಲಾ ಒಂದು ಕೋಚ್ಗೆ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಲಿದೆ ಎನ್ನಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ ೪೦ ಸಾವಿರ ಕೋಚ್ಗಳನ್ನು ರೈಲ್ವೇ ಅಳವಡಿಸುವ ಗುರಿಯನ್ನು ಹೊಂದಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.