ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹತ್ವದ ಶಿಕ್ಷಣ ಸುಧಾರಣಾ ಕ್ರಮವನ್ನು ಜಾರಿಗೊಳಿಸಲು ಮುಂದಾಗಿದೆ. ಮೂಲಗಳ ಪ್ರಕಾರ ಅದು ಶೀಘ್ರದಲ್ಲೇ ಯುಜಿಸಿ (University Grants Commission ) ಮತ್ತು ಎಐಸಿಟಿಇ ( All India Council for Technical Education)ನ್ನು ತೆಗೆದು ಹಾಕಿ, ಅದರ ಜಾಗಕ್ಕೆ ಏಕ ಉನ್ನತ ಶಿಕ್ಷಣ ನಿಯಂತ್ರಕ ಸಂಸ್ಥೆಯನ್ನು ತರಲಿದೆ.
ಯುಜಿಸಿ ಮತ್ತು ಎಐಸಿಟಿಇಗಳ ಬದಲು ‘ಹೈಯರ್ ಎಜುಕೇಶನ್ ಎಂಪವರ್ಮೆಂಟ್ ರೆಗ್ಯುಲೇಶನ್ ಏಜೆನ್ಸಿ (HEERH)ವನ್ನು ತರಲು ಕೇಂದ್ರ ಸಜ್ಜಾಗಿದೆ.
ಮೋದಿ ನೇತೃತ್ವದಲ್ಲಿ ಮಾರ್ಚ್ನಲ್ಲಿ ನಡೆದ ಶಿಕ್ಷಣ ಸಭೆಯಲ್ಲಿ ಈ ಬಗೆಗಿನ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಹೊಸ ನಿಯಂತ್ರಕದ ಜಾರಿಗೆ ತುಸು ಸಮಯ ಹಿಡಿಯಲಿದೆ. ಹೀಗಾಗೀ ಪ್ರಸ್ತುತ ಇರುವ ನಿಯಮಗಳ ತಿದ್ದುಪಡಿಯನ್ನು ಮಧ್ಯಂತರ ಸುಧಾರಣಾ ಕ್ರಮಗಳು ಎಂದು ಪರಿಗಣಿಸಲಾಗುತ್ತದೆ.
HEERA ಜಾರಿಗೆ ಬಂದರೆ ಅದೊಂದು ಅತೀ ಮಹತ್ವದ, ಸ್ವಚ್ಛ, ವ್ಯಾಪಾಕ ಶಕ್ಷಣ ಸುಧಾರಣಾ ಕ್ರಮ ಎಂದು ಪರಿಗಣಿಸಲ್ಪಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.