ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ಇಸ್ರೋ ಇದೀಗ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧನೆಗೆ ಸಜ್ಜಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜೂನ್ ತಿಂಗಳ ಮೊದಲ ವಾರದಲ್ಲೇ ಭಾರತದ ಅತೀ ಭಾರತದ ರಾಕೆಟ್ನ್ನು ನಭಕ್ಕೆ ಚಿಮ್ಮಿಸುವ ಪರೀಕ್ಷಾರ್ಥ ಪ್ರಯೋಗ ನಡೆಸಲಿದೆ. ಇದು ಯಶಸ್ವಿಯಾದರೆ ಭಾರತೀಯರ ಬಾಹ್ಯಾಕಾಶಕ್ಕೆ ಹಾರುವ ಕನಸು ನನಸಾಗಲಿದೆ.
ಏಷ್ಯಾಖಂಡದ 200 ಸದೃಢ ಆನೆಗಳ ತೂಕಕ್ಕೆ ಹೋಲಿಸಲಾಗಿರುವ ಜಿಯೋಸಿಂಕ್ರೋನಸ್ ಸೆಟ್ಲೈಟ್ ಲಾಂಚ್ ವೆಹ್ಹಿಕಲ್ ಮಾರ್ಕ್ III( ಜಿಎಸ್ಎಲ್ವಿ ಮಾರ್ಕ್-III) ಭಾರತೀಯರನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯವ ಸಾಮರ್ಥ್ಯ ಹೊಂದಿದೆ.
ಈ ಅತೀ ಭಾರದ ರಾಕೆಟ್ನ್ನು ಇದೇ ಮೊದಲ ಬಾರಿಗೆ ಭಾರತ ನಿರ್ಮಿಸಿದ್ದು, ಜಿಎಸ್ಎಲ್ವಿ ಮಾರ್ಕ್ III ಅತೀ ಭಾರದ ಸೆಟ್ಲೈಟ್ನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ. ಇದರ ಮೂಲಕ ಇಸ್ರೋ ವಿಶ್ವದ ಅತೀ ತೂಕದ ಮಲ್ಟಿ-ಬಿಲಿಯನ್ ಡಾಲರ್ ರಾಕೆಟ್ ಉಡಾವಣೆ ಕ್ಷೇತ್ರಕ್ಕೆ ಧುಮುಕಲಿದೆ.
ಕಡಿಮೆ ಭೂ ಕಕ್ಷೆಯಲ್ಲಿ 6 ಟನ್ ಭಾರ ಹೊರಬಲ್ಲ ಈ ರಾಕೆಟ್ ಭಾರತೀಯ ಸಿಬ್ಬಂದಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನೂ ಹೊಂದಿದೆ.
ಭಾರತೀಯರನ್ನು ಭಾರತೀಯ ಮಣ್ಣಿನಿಂದ ಭಾರತೀಯ ರಾಕೆಟ್ ಮೂಲಕ ನಭಕ್ಕೆ ಕಳುಹಿಸುವ ಕನಸನ್ನು ಈ ರಾಕೆಟ್ ಸಾಕಾರ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.