ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಆಯೋಜಿಸಿರುವ ಇವಿಎಂ ಹ್ಯಾಕಾಥಾನ್ನಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಳ್ಳುಲು ಇರುವ ಡೆಡ್ಲೈನ್ ಶುಕ್ರವಾರ ಸಂಜೆ 5 ಗಂಟೆಗೆ ಮುಕ್ತಾಯವಾಗಲಿದೆ. ಆದರೆ ಇದುವರೆಗೆ ಯಾರೊಬ್ಬರು ಇದರಲ್ಲಿ ಭಾಗವಹಿಸಲು ಮುಂದಾಗಿಲ್ಲ.
ಮತಯಂತ್ರವನ್ನು ಹ್ಯಾಕ್ ಮಾಡುವಂತೆ ಚುನಾವಣಾ ಆಯೋಗ ನೀಡಿದ್ದ ಬಹಿರಂಗ ಸವಾಲಿನಲ್ಲಿ ಪಾಲ್ಗೊಳ್ಳಲು ಯಾರೊಬ್ಬರೂ ಮುಂದಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹ್ಯಾಕಥಾನ್ ಜೂನ್ 3ರಿಂದ 5 ದಿನಗಳವರೆಗೆ ನಡೆಯಲಿದೆ.
4 ರಾಷ್ಟ್ರೀಯ ಪಕ್ಷಗಳು ಹಾಗೂ 49 ಪ್ರಾದೇಶಿಕ ಪಕ್ಷಗಳಿಗೆ ಹ್ಯಾಕಥಾನ್ನಲ್ಲಿ ಭಾಗವಹಿಸಲು ಇಂದು 5 ಗಂಟೆಯವರೆಗೆ ಸಮಯವಕಾಶವಿದೆ.
ಮತಯಂತ್ರವನ್ನು ಹ್ಯಾಕ್ ಮಾಡಲು ಸಾಧ್ಯವಿದೆ ಎಂದು ವಾದಿಸುತ್ತಿದ್ದ ಎಎಪಿ ಇದೀಗ ಹ್ಯಾಕಾಥಾನ್ನ ನಿಯಮಗಳನ್ನು ಬದಲಿಸುವಂತೆ ಹೇಳುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.