ನವದೆಹಲಿ: 3 ವರ್ಷಗಳ ಆಡಳಿತದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಸಾಮಾಜಿಕ ಜಾಲತಾಣಗಳಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
2014ರಿಂದ ಕೇವಲ ಮೋದಿಯವರ ಸಾಮಾಜಿಕ ಜಾಲತಾಣ ಫಾಲೋವರ್ಗಳ ಸಂಖ್ಯೆಯಲ್ಲಿ ಏರಿಕೆಯಾಗಿಲ್ಲ, ಬದಲಾಗಿ ವಿವಿಧ ಸಚಿವಾಲಯಗಳ ಇ-ಗವರ್ನೆನ್ಸ್ ಕಾರ್ಯದಿಂದಾಗಿ ಹಲವಾರು ನಾಗರಿಕರು ಟ್ವಿಟರ್ ಮೂಲಕ ತಮ್ಮ ದೂರುಗಳನ್ನು ದಾಖಲಿಸಿದ್ದಾರೆ.
ವಿದೇಶಾಂಗ ಸಚಿವಾಲಯ ಮತ್ತು ರೈಲ್ವೇ ಸಚಿವಾಲಯ ಟ್ವಿಟರ್ಗಳ ಮೂಲಕ ಹಲವಾರು ಸಮಸ್ಯೆಗಳನ್ನು ಬಗೆಹರಿಸಿವೆ. ರೈಲ್ವೇ ಸಚಿವಾಯ ನಿತ್ಯ 7 ಸಾವಿರ ಟ್ವಿಟ್ಗೆ ಪ್ರತಿಕ್ರಿಯೆ ನೀಡುತ್ತದೆ.
ವಿದೇಶಾಂಗ ಸಚಿವಾಲಯ 2016ರ ಡಿಸೆಂಬರ್ನಿಂದ ಇದುವರೆಗೆ 10,999 ದೂರುಗಳನ್ನು ಆಲಿಸಿದೆ. ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ಟ್ವಿಟರ್ ಸೇವಾ ಮೂಲಕ 750 ಸಮಸ್ಯೆಗಳನ್ನು ಬಗೆಹರಿಸಿದೆ.
ಟ್ರಾನ್ಸ್ಫಾರ್ಮಿಂಗ್ ಇಂಡಿಯಾ, ಮೇಕ್ಇನ್ಇಂಡಿಯಾ, ಮನ್ಕೀಬಾತ್, ಡಿಮಾನಿಟೈಝೇಶನ್, ಫೇಕ್ಕೇಸಸ್ ಕಳೆದ ಮೂರು ವರ್ಷದ ಟಾಪ್ ಐದು ಹ್ಯಾಶ್ಟ್ಯಾಗ್ಗಳಾಗಿವೆ.
ಸುಷ್ಮಾ ಸ್ವರಾಜ್ ಅವರಿಗೆ 8.04 ಮಿಲಿಯನ್, ಅರುಣ್ ಜೇಟ್ಲಿಯವರಿಗೆ 7.69ಮಿಲಿಯನ್, ಸ್ಮೃತಿ ಇರಾನಿಯವರಿಗೆ 6.37 ಮಿಲಿಯನ್, ರಾಜನಾಥ್ ಸಿಂಗ್ ಅವರಿಗೆ 5.55 ಮಿಲಿಯನ್ ಟ್ವಿಟರ್ ಫಾಲೋವರ್ಗಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.