ನವದೆಹಲಿ: ಬಲವಂತದಿಂದ ಪಾಕಿಸ್ಥಾನಿಯನ್ನು ಮದುವೆಯಾಗಿ ಚಿತ್ರಹಿಂಸೆ ಅನುಭವಿಸುತ್ತಿದ್ದ ಭಾರತೀಯ ಮಹಿಳೆ ಉಜ್ಮಾ ಕೊನೆಗೂ ಭಾರತೀಯ ಹೈಕಮಿಷನ್ ಮತ್ತು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದ ಭಾರತಕ್ಕೆ ಮರಳಿದ್ದಾಳೆ.
ಇಸ್ಲಾಮಾಬಾದ್ ಹೈಕೋರ್ಟ್ ಆದೇಶದಂತೆ ಉಜ್ಮಾರನ್ನು ವಾಘಾ ಗಡಿಯ ಮೂಲಕ ಬಿಗಿ ಭದ್ರತೆಯೊಂದಿಗೆ ಭಾರತಕ್ಕೆ ಕರೆ ತರಲಾಗಿದೆ. ಬಿಎಸ್ಎಫ್ ಯೋಧರು ಗಡಿಯಲ್ಲಿ ಇವರನ್ನು ಬರಮಾಡಿಕೊಂಡು ದೆಹಲಿಗೆ ತಂದು ಬಿಟ್ಟಿದ್ದಾರೆ.
ಅಲಿ ಎಂಬಾತ ಬಲವಂತದಿಂದ ನನ್ನನ್ನು ಮದುವೆಯಾಗಿ ಪಾಕಿಸ್ಥಾನಕ್ಕೆ ಕರೆ ತಂದಿದ್ದ ಎಂದು ಅಜ್ಮಾ ಆರೋಪಿಸಿದ್ದು, ಆತನ ಹಾಗೂ ಆತನ ಮನೆಯವರ ಚಿತ್ರಹಿಂಸೆ ತಾಳಲಾರದೆ 2017ರ ಮೇ 5ರಿಂದ ಆಕೆ ಇಸ್ಲಾಮಾಬಾದಿನಲ್ಲಿನ ಭಾರತೀಯ ಹೈಕಮಿಷನ್ನಲ್ಲಿ ಆಶ್ರಯಪಡೆದುಕೊಂಡಿದ್ದರು.
ಆಕೆಯ ಆಗಮನಕ್ಕೆ ಸಂತಸ ವ್ಯಕ್ತಪಡಿಸಿರುವ ಸುಷ್ಮಾ ‘ಭಾರತೀಯ ಮಗಳಿಗೆ ಸ್ವಾಗತ..ನಿನಗಾದ ಸಂಕಷ್ಟಗಳಿಗೆ ಕ್ಷಮೆ ಕೋರುತ್ತೇನೆ’ ಎಂದು ಟ್ವಿಟ್ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.