ನವದೆಹಲಿ: ವಿದೇಶಕ್ಕೆ ತೆರಳುವವರ ದಾಖಲೆಗಳ ದೃಢೀಕರಣವನ್ನು ಡಿಜಟಲೀಕರಣಗೊಳಿಸುವ ಸೇವೆಯನ್ನು ಆರಂಭಿಸುವುದಾಗಿ ಸರ್ಕಾರ ಘೋಷಿಸಿದೆ. ಇದರಿಂದಾಗಿ ಅವರು ಸರ್ಕಾರಿ ಕಛೇರಿಗಳಿಗೆ ಅಲೆದಾಡುವ ಕಷ್ಟ ತಪ್ಪುತ್ತದೆ.
‘ಇ-ಸನಡ್’ ಎಂಬ ಕಾರ್ಯಕ್ರಮವನ್ನು ವಿದೇಶಾಂಗ ಸಚಿವಾಲಯ ಇತರ ಎರಡು ಸಚಿವಾಲಯಗಳ ಸಹಕಾರದೊಂದಿಗೆ ಆರಂಭಿಸಿದ್ದು, ಆರಂಭಿಕವಾಗಿ ಇದು ಸಿಬಿಎಸ್ಇಯ ಸಹಾಯದೊಂದಿಗೆ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ನ್ನು ಹೋಸ್ಟಿಂಗ್ ಮಾಡಲಿದೆ. ಮುಂದಿನ ಹಂತವಾಗಿ ಇದು ಕೇಂದ್ರೀಯ ವಿಶ್ವವಿದ್ಯಾಲಯಗಳ ದಾಖಲೆಗಳನ್ನೂ ಹೋಸ್ಟಿಂಗ್ ಮಾಡಲಿದೆ.
ಅಂಕಪಟ್ಟಿ, ವಲಸೆ ಸರ್ಟಿಫಿಕೇಟ್ ಮುಂತಾದ ದಾಖಲೆಗಳನ್ನು ಇ-ಸನಡ್ನೊಂದಿಗೆ ಏಕೀಕೃತಗೊಳಿಸಲಾಗುತ್ತದೆ. ಎಚ್ಆರ್ಡಿ ಮತ್ತು ಎಲೆಕ್ಟ್ರಾನಿಕ್ಸ್ ಆಂಡ್ ಇನ್ಫಾರ್ಮೆಶನ್ ಟೆಕ್ನಾಲಜಿ ಸಚಿವಾಲಯದ ಸಹಾಯದೊಂದಿಗೆ ಈ ಕಾರ್ಯಕ್ರಮವನ್ನು ಜಾರಿಗೊಳಿಸುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ವಿದೇಶಕ್ಕೆ ಹೋಗುವ ಪ್ರತಿಯೊಬ್ಬರಿಗೂ ದಾಖಲೆಗಳ ದೃಢೀಕರಣ ದೊಡ್ಡ ಸಮಸ್ಯೆಯಾಗಿರುತ್ತದೆ. ಬೆಂಗಳೂರಿಗ ವಿದೇಶಕ್ಕೆ ಹೋಗಬೇಕಾದರೆ ಆತ ದೆಹಲಿಗೆ ತೆರಳಿ ದಾಖಲೆ ದೃಢೀಕರಣ ಮಾಡುವ ಪ್ರಮೇಯವೂ ಬರುತ್ತದೆ. ಇದರಲ್ಲಿ ಭ್ರಷ್ಟಾಚಾರಗಳೂ ನಡೆಯುತ್ತದೆ. ಹಣವೂ ವ್ಯಯವಾಗುತ್ತದೆ. ಅದನ್ನು ತಪ್ಪಿಸುವುದಕ್ಕಾಗಿ ಇ-ಸನಡ್ ತರುತ್ತಿದ್ದೇವೆ ಎಂದು ಸುಷ್ಮಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.