ನವದೆಹಲಿ: 10+2 ಟೆಕ್ನಿಕಲ್ ಎಂಟ್ರಿ ಸ್ಕೀಂ ಕೋರ್ಸ್-38ಗೆ ಭಾರತೀಯ ಸೇನೆಯು ಅರ್ಹ ವ್ಯಕ್ತಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. 2018ರ ಜನವರಿಯಿಂದ ಕೋರ್ಸ್ ಆರಂಭವಾಗಲಿದೆ.
10+2ನಲ್ಲಿ ಭಾತಶಾಸ್ತ್ರ, ರಾಸಾಯನಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಪೂರ್ಣಗೊಳಿಸಿದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗಾಗಿ ಈ ನೇಮಕಾತಿಯನ್ನು ಮಾಡಲಾಗುತ್ತಿದೆ. ಇದಕ್ಕಾಗಿ ಆನ್ಲೈನ್ ಅರ್ಜಿ ಹಾಕುವ ಪ್ರಕ್ರಿಯೆಯು ಮೇ 16ರಿಂದಲೇ ಆರಂಭಗೊಂಡಿದ್ದು, ಜೂನ್ 14ಕ್ಕೆ ಅಂತ್ಯಗೊಳ್ಳುತ್ತದೆ.
ಅಧಿಕೃತ ಸುತ್ತೋಲೆಯ ಪ್ರಕಾರ ಒಟ್ಟು 90 ಹುದ್ದೆಗಳು ಖಾಲಿ ಇದೆ, 4 ವರ್ಷವನ್ನು ಯಶಸ್ವಿಯಾಗಿ ಪೂರೈಸಿದ ಆಯ್ಕೆ ಮಾಡಿದ ಅಭ್ಯರ್ಥಿಗಳು ಭಾರತೀಯ ಸೇನೆಯ ಲೆಫ್ಟಿನೆಂಟ್ ರ್ಯಾಂಕ್ನಲ್ಲಿ ಖಾಯಂ ಆಗಿ ಭರ್ತಿ ಆಗಲಿದ್ದಾರೆ.
ಅಭ್ಯರ್ಥಿಗಳು 10+2ನಲ್ಲಿ ಭೌತ, ರಾಸಾಯನ, ಗಣಿತದಲ್ಲಿ ಶೇ.70ರಷ್ಟು ಅಂಕವನ್ನು ಪಡೆದು ಉತ್ತೀರ್ಣಗೊಂಡಿರುವುದು ಅತ್ಯಗತ್ಯವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.