ವಾಷಿಂಗ್ಟನ್: 3 ವರ್ಷಗಳ ಆಡಳಿತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾರತದ ಜಾಗತಿಕ ಇಮೇಜ್ನ್ನು ಬದಲಾಯಿಸಿದ್ದಾರೆ ಎಂದು ಯುಎಸ್ ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್(ಯುಎಸ್ಐಬಿಸಿ) ಹೇಳಿದೆ.
ವಿವಿಧ ವಲಯಗಳಲ್ಲಿನ ಭಾರತದ ಆರ್ಥಿಕ ಉದಾರೀಕರಣವು ಮೇಕ್ ಇನ್ ಇಂಡಿಯಾದ ವಿದೇಶಿ ಹೂಡಿಕೆದಾರರಿಗೆ ಒಂದು ಧನಾತ್ಮಕ ಸಂದೇಶವಾಗಿದೆ ಎಂದು ಯುಎಸ್ಐಬಿಸಿ ಅಧ್ಯಕ್ಷ ಮುಖೇಶ್ ಅಘಿ ಅಭಿಪ್ರಾಯಪಟ್ಟಿದ್ದಾರೆ.
ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವಂತಹ ಅತೀ ಕಠಿಣ, ಪರಿವರ್ತನೀಯ ನಿರ್ಧಾರಗಳನ್ನು ತಾನು ತೆಗೆದುಕೊಳ್ಳಬಲ್ಲೆ ಎಂಬುದನ್ನು ಮೋದಿ ಕಳೆದ 3 ವರ್ಷದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಜಿಎಸ್ಟಿ, ಬ್ಯಾಂಕ್ರಪ್ಟೀಸ್ ಕೋಡ್ನಂತಹ ಮಹತ್ವದ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದಿರುವುದು ಶಾಸಕಾಂಗ ಮತ್ತು ರಾಜಕೀಯ ವಿಜಯವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.