ನವದೆಹಲಿ: 2025ರೊಳಗೆ ಭಾರತೀಯ ಮಾಹಿತಿ ತಂತ್ರಜ್ಞಾನ ವಲಯ(ಐಟಿ ಸೆಕ್ಟರ್)ನಲ್ಲಿ ಸುಮಾರು 25-30 ಲಕ್ಷದಷ್ಟು ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಕೇಂದ್ರ ಐಟಿ ಸಚಿವ ರಚಿಶಂಕರ್ ಪ್ರಸಾದ್ ಹೇಳಿದ್ದಾರೆ.
ಐಟಿ ವಲಯದಲ್ಲಿ ಉದ್ಯೋಗ ಅವಕಾಶಗಳು ಕುಂಠಿತವಾಗುತ್ತಿದೆ ಎಂಬ ವಾದವನ್ನು ಸಂಪೂರ್ಣ ತಳ್ಳಿಹಾಕಿರುವ ಅವರು, ಡಿಜಿಟಲ್ ಎಕಾನಮಿ ಹೆಚ್ಚಾಗುತ್ತಿದ್ದಂತೆ ಐಟಿ ವಲಯ ಅಭಿವೃದ್ಧಿ ಕಾಣುತ್ತದೆ ಎಂದಿದ್ದಾರೆ.
ಭಾರತದ ಐಟಿ ಕಂಪನಿಗಳು ಕಳೆದ ಮೂರು ವರ್ಷದಲ್ಲಿ 6 ಲಕ್ಷ ಉದ್ಯೋಗವನ್ನು ನೀಡಿವೆ. ಪ್ರಸ್ತುತ ಅದು 40 ಲಕ್ಷ ಜನರಿಗೆ ನೇರ ಮತ್ತು 1.3 ಲಕ್ಷ ಜನರಿಗೆ ಪರೋಕ್ಷ ಉದ್ಯೋಗವನ್ನು ನೀಡುತ್ತಿದೆ ಎಂದರು.
ಸಣ್ಣ ಗ್ರಾಮಗಳಲ್ಲಿ ಬಿಪಿಒ ತರುತ್ತಿದ್ದೇವೆ, ಇದೊಂದು ಮಹತ್ವದ ಸನ್ನಿವೇಶ. ಈ ವಲಯ ಪ್ರಗತಿಯಾಗುತ್ತಿದೆ, 4-5 ವರ್ಷದಲ್ಲಿ 20-25 ಲ್ಷ ಹೆಚ್ಚುವರಿ ಉದ್ಯೋಗ ನೀಡುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.