ನವದೆಹಲಿ: ಮ್ಯಾನ್ಚೆಸ್ಟರ್ ಅರೆನಾದಲ್ಲಿ ಸೋಮವಾರ ರಾತ್ರಿ ಶಂಕಿತ ಭಯೋತ್ಪಾದನಾ ದಾಳಿ ನಡೆದಿದ್ದು 19 ಜನ ಮೃತರಾಗಿದ್ದಾರೆ. 15 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆಯನ್ನು ಪ್ರಧಾನಿ ಮೋದಿ ತೀವ್ರವಾಗಿ ಖಂಡಿಸಿದ್ದಾರೆ.
ಇದನ್ನು ಟ್ವೀಟ್ ಮಾಡಿರುವ ಮೋದಿ ಮ್ಯಾನ್ಚೆಸ್ಟರ್ನಲ್ಲಿ ನಡೆದ ದಾಳಿಯಿಂದ ತೀವ್ರ ನೋವಾಗಿದೆ. ಈ ದಾಳಿಯನ್ನು ನಾವು ಖಂಡಿಸುತ್ತೇವೆ. ಮೃತರ ಕುಟುಂಬದೊಂದಿಗೆ ನಮ್ಮ ಚಿಂತನೆಗಳು ಮತ್ತು ಗಾಯಾಳುಗಳೊಂದಿಗೆ ನಮ್ಮ ಪ್ರಾರ್ಥನೆಗಳು ಇರಲಿವೆ ಎಂದಿದ್ದಾರೆ.
Pained by the attack in Manchester. We strongly condemn it. Our thoughts are with the families of the deceased & prayers with the injured.
— Narendra Modi (@narendramodi) May 23, 2017
ಪಾಪ್ ಗಾಯಕಿ ಅರಿಯಾನಾ ಗ್ರಾಂಡೆಯ ಸಂಗೀತ ಕಾರ್ಯಕ್ರಮದ ವೇಳೆ ಶಂಕಿತ ಭಯೋತ್ಪಾದನೆ ದಾಳಿ ನಡೆದಿದೆ. 19 ಜನರ ಸಾವಿನ ಬಗ್ಗೆ ಗ್ರೆಟರ್ ಮ್ಯಾನ್ಚೆಸ್ಟರ್ ಪೊಲೀಸ್ ಖಚಿತ ಮಾಹಿತಿ ನೀಡಿದ್ದು, ತನಿಖೆಯನ್ನು ಆರಂಭಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.