ನವದೆಹಲಿ : 2025 ರೊಳಗೆ ಭಾರತವನ್ನು ಕೇಂದ್ರ ಸರ್ಕಾರವು ಟಿಬಿ ಮುಕ್ತಗೊಳಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಘೋಷಣೆ ಮಾಡಿದ್ದಾರೆ.
‘ಸ್ಟಾಪ್ ಟಿಬಿ’ ಕಾರ್ಯಕ್ರಮದ ಸಂಯೋಜನಾ ಸಮಿತಿಯ ೨೯ ನೇ ಬೋರ್ಡ್ ಮೀಟಿಂಗ್ನಲ್ಲಿ ನಡ್ಡಾ ಅವರು ಭಾರತವನ್ನು ಪ್ರತಿನಿಧಿಸಿದರು.
‘2030 ರೊಳಗೆ ವಿಶ್ವವನ್ನು ಟಿಬಿ ಮುಕ್ತಗೊಳಿಸುವ ಆಶಯವನ್ನು ಹೊಂದಲಾಗಿದೆ. ಆದರೆ ಮೋದಿ ನಾಯಕತ್ವದಲ್ಲಿ ನಾವು 2025 ರೊಳಗೇ ಭಾರತವನ್ನು ಟಿಬಿ ಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ’ ಎಂದಿದ್ದಾರೆ.
ರಾಷ್ಟ್ರೀಯ ತಂತ್ರಗಾರಿಕಾ ಕಾರ್ಯ ಯೋಜನೆಯಡಿ ನಮ್ಮ ಸರ್ಕಾರವು ಟಿಬಿ ನಿರ್ಮೂಲನಾ ಕಾರ್ಯಕ್ರಮವನ್ನು ತಳಮಟ್ಟದಿಂದಲೇ ಅನುಷ್ಠಾನಕ್ಕೆ ತರಲಿದೆ ಎಂದಿದ್ದಾರೆ.
ಈಗಾಗಲೇ 5 ರಾಜ್ಯಗಳಲ್ಲಿ ಡ್ರಗ್ ರೀಜನ್ಗಳನ್ನು ಅನುಷ್ಠಾನಗೊಳಿಸಲಾಗಿದೆ. ಈ ವರ್ಷದೊಳಗೆ ಇದು ದೇಶದಾದ್ಯಂತ ವಿಸ್ತರಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.