ನವದೆಹಲಿ: ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ತಮ್ಮ ಮುಂಬರುವ ಜೀವನಚರಿತ್ರೆ ‘ಸಚಿನ್-ಎ ಬಿಲಿಯನ್ ಡ್ರೀಮ್ಸ್’ ಬಗ್ಗೆ ವಿವರಿಸಿದರು.
ಈ ಬಗ್ಗೆ ಸಚಿನ್ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮೋದಿಗೆ ಸಿನಿಮಾದ ಬಗ್ಗೆ ಹೇಳಿ ಅವರಿಂದ ಆಶೀರ್ವಾದ ಪಡೆದುಕೊಂಡೆ ಎಂದಿದ್ದಾರೆ.
ಈ ಸಿನಿಮಾದಲ್ಲಿ ಸಚಿನ್ ಅವರ ಕ್ರಿಕೆಟ್ ಮತ್ತು ವೈಯಕ್ತಿಕ ಬದುಕುಗಳನ್ನು ತೋರಿಸಲಾಗುತ್ತದೆ. ಹೆಚ್ಚಿನವರಿಗೆ ಸಚಿನ್ ಬಗ್ಗೆ ತಿಳಿಯದ ಅಂಶಗಳು ಇದರಲ್ಲಿ ಇರಲಿದೆ ಎನ್ನಲಾಗಿದೆ.
ಮೇ 26ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.
ಕೇರಳ ಮತ್ತು ಛತ್ತೀಸ್ಗಢದಲ್ಲಿ ಈ ಸಿನಿಮಾಗೆ ವಿನಾಯಿತಿ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.