ಶ್ರೀನಗರ: ಇನ್ನು ಮುಂದೆ ಗುಟ್ಕಾ ಪಾನ್ ಮಸಾಲ ತಿನ್ನುವವವರು ಶೇ.204ರಷ್ಟು ಸೆಸ್ ನೀಡಲು ಸಿದ್ಧರಾಗಿರಬೇಕು. ಏರೇಟೆಡ್ ವಾಟರ್ ಖರೀದಿಸುವವರು ಶೇ.12ರಷ್ಟು ಸೆಸ್ ನೀಡಬೇಕು. ದೊಡ್ಡ ದೊಡ್ಡ ಕಾರುಗಳನ್ನು ಖರೀದಿ ಮಾಡುವವರು ಶೇ.15ರಷ್ಟು ಸೆಸ್ ನೀಡಬೇಕು. ಜುಲೈ1ರಿಂದಲೇ ಈ ನಿಯಮ ಜಾರಿಗೆ ಬರಲಿದೆ.
ಸರಕು ಮತ್ತು ಸೇವಾ ತೆರಿಗೆಯಡಿ ಡಿಮೆರಿಟ್ ಮತ್ತು ದುಬಾರಿ ಸರಕುಗಳ ಮೇಲೆ ಶೇ.28ರಷ್ಟಿರುವ ತೆರಿಗೆ ದರಕ್ಕಿಂತಲೂ ಅಧಿಕ ಸೆಸ್ ವಿಧಿಸಲು ಕೇಂದ್ರ ಮತ್ತು ರಾಜ್ಯಗಳು ಮುಂದಾಗಿವೆ.
1200ಸಿಸಿಗಿಂತ ಕಡಿಮೆ ಇರುವ ಸಣ್ಣ ಪೆಟ್ರೋಲ್ ಕಾರುಗಳು ಶೇ.1ರಷ್ಟು ಸೆಸ್ ನೀಡಬೇಕು, 1500ಸಿಸಿಗಿಂತ ಕಡಿಮೆ ಇರುವ ಡಿಸೀಲ್ ಇಂಜಿನ್ ಶೇ.3ರಷ್ಟು ಸೆಸ್ ನೀಡಬೇಕು ಎಂದು ಸಿಬಿಇಸಿ ವೆಬ್ಸೈಟ್ ಹಾಕಲಾದ ಸೆಸ್ ವಸ್ತುಗಳ ಪಟ್ಟಿಯಲ್ಲಿ ತಿಳಿಸಲಾಗಿದೆ.
ಶ್ರೀನಗರದಲ್ಲಿ ನಡೆದ 14ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ 7 ಸೆಟ್ ನಿಯಮಗಳನ್ನು ಹೊಸ ತೆರಿಗೆ ಅವಧಿಗಾಗಿ ಸಿದ್ಧಪಡಿಸಲಾಗಿದೆ. ತೆರಿಗೆ ದರ ಮತ್ತು ಸರಕುಗಳ ಸೆಸ್ನ್ನು ನಿಗಧಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.