ಮುಂಬಯಿ: ಗರ್ಭಿಣಿ ಮಹಿಳೆಯರಿಗೆ ವಿಷಕಾರಿ ಹೊಗೆಯ ಬಗ್ಗೆ ಎಚ್ಚರಿಕೆ ನೀಡುವ ಮತ್ತು ಭಾರತದಲ್ಲಿ ಮಾತೃತ್ವ ಆರೋಗ್ಯವನ್ನು ಉತ್ತೇಜಿಸುವ ಭರವಸೆ ನೀಡುವ ಹೈಟೆಕ್ ಬಳೆಯಂತಹ ಡಿವೈಸ್ವೊಂದನ್ನು ಅಭಿವೃದ್ಧಿಪಡಿಸಲಾಗಿದೆ.
ಈ ಬಣ್ಣಬಣ್ಣದ, ಲಘು ತೂಕದ ಬಳೆ ಆರೋಗ್ಯ ಸವಲತ್ತಿನಿಂದ ವಂಚಿರಾದ ಗ್ರಾಮೀಣ ಮಹಿಳೆಯರಿಗೆ ಹೆಚ್ಚಾಗಿ ಸಹಾಯಲಕವಾಗಲಿದೆ. ಇದು ಗರ್ಭಿಣಿಯರಿಗೆ ನೇರವಾಗಿ ಮಾಹಿತಿಯನ್ನು ನೀಡುತ್ತದೆ. ಗ್ರಾಮೀಣ ಬದುಕಿಗೆ ಅನುಗುಣವಾಗಿ ಇದನ್ನು ತಯಾರಿಸಲಾಗಿದೆ.
ಡ್ಯುರೆಬಲ್ ಪ್ಲಾಸ್ಟಿಕ್ ಮೂಲಕ ಇದನ್ನು ತಯಾರಿಸಲಾಗಿದ್ದು, ಜಲ ನಿರೋಧಕವಾಗಿದೆ. ಸುಧೀರ್ಘ ಬಾಳಿಕೆಯ ಬ್ಯಾಟರಿ ಹೊಂದಿದೆ. ಇಂಟರ್ನೆಟ್ ಕನೆಕ್ಷನ್ನ ಅಗತ್ಯವೂ ಇದಕ್ಕಿಲ್ಲ.
ಥೋಮ್ಸನ್ ರಾಯ್ಟರ್ಸ್ ಫೌಂಡೇಶನ್ ಇದನ್ನು ಅಭಿವೃದ್ಧಿಪಡಿಸಿದೆ. ಮಾತೃತ್ವ ಆರೋಗ್ಯಕ್ಕಾಗಿ ಮೊಬೈಲ್ ಅಪ್ಲಿಕೇಶನನ್ನೂ ಇದು ಸಿದ್ಧಪಡಿಸಿದೆ.
ಉತ್ತರಪ್ರದೇಶದ ಹಲವಡೆ ಇದನ್ನು ಗರ್ಭಿಣಿಯರಿಗೆ ನೀಡಿ ಪರೀಕ್ಷಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.