ನವದೆಹಲಿ: ಮೂರು ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಭಾರೀ ಗಾತ್ರದ ಎಂ777 ಅಲ್ಟ್ರಾ ಅರ್ಟಿಲರಿ ಗನ್ಸ್ಗಳನ್ನು ಪಡೆಯಲಿದೆ. ಅಮೆರಿಕಾಗೆ ಒಟ್ಟು 145 ಎಂ777 ಗನ್ ಪೂರೈಕೆಗೆ ಅರ್ಡರ್ ನೀಡಲಾಗಿದ್ದು, ಇದರ ಪೈಕಿ ಶೀಘ್ರದಲ್ಲೇ ಎರಡು ಗನ್ಗಳು ಭಾರತದ ಕೈಸೇರಲಿವೆ.
ಈ ವಾರಾಂತ್ಯದಲ್ಲಿ ನಿಗದಿಗಿಂತಲೂ ಮೊದಲೇ ಎರಡು ಎಂ777 ಅಲ್ಟ್ರಾ ಲೈಟ್ವೇಟ್ ಹೌವಿಟ್ಜರ್ಗಳು ಅಮೆರಿಕಾದಿಂದ ಭಾರತಕ್ಕೆ ಬರಲಿದೆ ಎಂದು ಬಿಎಇ ಸಿಸ್ಟಮ್ಸ್ ವಕ್ತಾರರು ತಿಳಿಸಿದ್ದಾರೆ.
ಹೊಸ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಭಾರತೀಯ ಸೇನೆಯ ಆರ್ಟಿಲರಿ ಮಾಡರ್ನ್ನೈಜೇಶನ್ ಸಿಸ್ಟಮ್ನೊಂದಿಗೆ ಸಂಯೋಜಿತಗೊಳಿಸುತ್ತಿರುವ ಅಮೆರಿಕಾ ಸರ್ಕಾರಕ್ಕೆ ನಾವು ಬೆಂಬಲ ನೀಡುತ್ತೇವೆ ಎಂದು ಅವರು ಹೇಳಿದ್ದಾರೆ.
ಫಾರಿನ್ ಮಿಲಿಟರಿ ಸೇಲ್ ರೂಟ್ ಮೂಲಕ ನವೆಂಬರ್ 30ರಂದು ಭಾರತವು ಅಮೆರಿಕಾದೊಂದಿಗೆ 145 ಎಂ777 ಅಲ್ಟ್ರಾ ಆರ್ಟಿಲರಿ ಗನ್ ಖರೀದಿಯ ಬಗ್ಗೆ ಒಪ್ಪಂದಕ್ಕೆ ಸಹಿ ಮಾಡಿತ್ತು.
1980ರಲ್ಲಿ ಭಾರತವು ಕೊನೆಯ ಬಾರಿಗೆ ಅಲ್ಟ್ರಾ ಆಟಿಲರಿ ಗನ್ಗಳನ್ನು ಸ್ವಿಡೀಶ್ನಿಂದ ಖರೀದಿ ಮಾಡಿತ್ತು. ಇದು ಬೋಫೊರ್ಸ್ ಸ್ಕ್ಯಾಂಡಲ್ ಆಗಿ ದೊಡ್ಡ ವಿವಾದ ಸೃಷ್ಟಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.