ನವದೆಹಲಿ: ತ್ರಿವಳಿ ತಲಾಖ್ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರ ನೇತೃತ್ವದ ಐವರನ್ನು ಒಳಗೊಂಡ ನ್ಯಾಯಪೀಠ ಬುಧವಾರ ಆಲ್ ಇಂಡಿಯಾ ಮುಸ್ಲಿಂ ಪಸರ್ನಲ್ ಲಾ ಬೋರ್ಡ್ಗೆ ಮಹತ್ವದ ಪ್ರಶ್ನೆಯೊಂದನ್ನು ಕೇಳಿದೆ.
ನಿಖಾನಾಮವನ್ನು ಅಂತ್ಯಗೊಳಿಸುವ ವೇಳೆ ಮಹಿಳೆಯರಿಗೆ ತ್ರಿವಳಿ ತಲಾಖ್ನ್ನು ಉಚ್ಚರಿಸುವ ಆಯ್ಕೆ ಇದೆಯೇ ಎಂದು ಸುಪ್ರೀಂ ಮುಸ್ಲಿಂ ಲಾ ಬೋರ್ಡ್ನ್ನು ಪ್ರಶ್ನಿಸಿದೆ. ಅಲ್ಲದೇ ನಿಖಾನಾಮದಲ್ಲಿ ಗಂಡ ಮೂರು ಬಾರಿ ತಲಾಖ್ ಹೇಳುವುದರಿಂದ ಮದುವೆ ರದ್ದಾಗುವುದಿಲ್ಲ ಎಂದು ನಮೋದಿಸಿ ಎಂದಿದೆ.
ಇದಕ್ಕೆ ಉತ್ತರಿಸಿರುವ ಬೋರ್ಡ್, ಮಹಿಳೆಯರಿಗೆ ಎಲ್ಲಾ ವಿಧದಲ್ಲೂ ತ್ರಿವಳಿ ತಲಾಖ್ ನೀಡುವ ಅವಕಾಶವಿದೆ. ಅಲ್ಲದೇ ತಲಾಖ್ ಪಡೆಯಲು ಹೆಚ್ಚಿನ ಹಣವನ್ನು ಕೇಳುವ ಅವಕಾಶವೂ ಇದೆ ಎಂದಿದೆ.
ಮುಸ್ಲಿಂ ಸಮುದಾಯದಲ್ಲಿ ಮದುವೆ ಎಂಬುದು ಒಂದು ಕಾಂಟ್ರ್ಯಾಕ್ಟ್ ಇದ್ದಂತೆ ಎಂದು ಮುಸ್ಲಿಂ ಬೋರ್ಡ್ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.