ಅಮರಾವತಿ: ಆಂಧ್ರಪ್ರದೇಶ ಸರ್ಕಾರ ಒಲಿಂಪಿಕ್ ಬೆಳ್ಳಿ ಪದಕ ವಿಜೇತಿ ಪಿ.ವಿ.ಸಿಂಧು ಅವರನ್ನು ಗ್ರೂಪ್-1 ಅಧಿಕಾರಿಯಾಗಿ ನೇಮಕಗೊಳಿಸಿದೆ. ಇದಕ್ಕಾಗಿ ಅದು ತನ್ನ ರಾಜ್ಯ ಸಾರ್ವಜನಿಕ ಸೇವಾ ಕಾಯ್ದೆಗೆ ತಿದ್ದುಪಡಿಯನ್ನು ತಂದಿದೆ.
ಇಲ್ಲಿ ವಿಧಾನಸಭೆಯಲ್ಲಿ ಸಿಂಧು ಅವರನ್ನು ಗ್ರೂಪ್-1 ಅಧಿಕಾರಿಯನ್ನಾಗಿ ನೇಮಕಗೊಳಿಸುವ ಮಸೂದೆಯನ್ನು ಅನುಮೋದನೆಗೊಳಿಸಲಾಗಿದೆ.
ಆಂಧ್ರ ಪ್ರದೇಶದ ಕೆಲವೊಂದು ನಿಬಂಧನೆಗಳು ಬ್ಯಾಡ್ಮಿಂಟನ್ ಆಟಗಾರರು ಸಾರ್ವಜನಿಕ ಸೇವೆಯ ಗ್ರೂ-1 ಅಧಿಕಾರಿಗಳನ್ನಾಗುವುದನ್ನು ತಡೆಯುತ್ತದೆ. ಕೇವಲ ಆಂಧ್ರಪ್ರದೇಶ ಸಾರ್ವಜನಿಕ ಸೇವಾ ಸಮಿತಿ, ಅಯ್ಕೆ ಸಮಿತಿ ಅಥವಾ ಉದ್ಯೋಗ ವಿನಿಮಯಗಳ ಮೂಲಕ ಮಾತ್ರ ಸಾರ್ವಜನಿಕ ಸೇವಾ ಅಧಿಕಾರಿಯಾಗಿ ನೇಮಕವಾಗಬಹುದು.
ಹೀಗಾಗಿ ಸಿಂಧು ಅವರನ್ನು ಗ್ರೂಪ್-೧ ಅಧಿಕಾರಿಯನ್ನಾಗಿಸುವ ಆಶಯಹೊಂದಿದ್ದ ಅಲ್ಲಿನ ಸರ್ಕಾರ ತನ್ನ ಸಾರ್ವಜನಿಕ ಸೇವಾ ಕಾಯ್ದೆಗೆಯೇ ತಿದ್ದುಪಡಿಯನ್ನು ತಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.