ನವದೆಹಲಿ: ಹತ್ತಿ ಬಟ್ಟೆಯನ್ನು ಪ್ರಚಾರಪಡಿಸುವ ಉದ್ದೇಶದಿಂದ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರು ಟ್ವಿಟರ್ನಲ್ಲಿ #CottonIsCool (ಕಾಟನ್ಈಸ್ಕೂಲ್) ಎಂಬ ಅಭಿಯಾನ ಆರಂಭಿಸಿದ್ದು, ಅದಕ್ಕೆ ರಾಜಕಾರಣಿಗಳು ಸೇರಿದಂತೆ ಎಲ್ಲಾ ವರ್ಗದವರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾಟನ್ ಉತ್ಪಾದಕರು ಮತ್ತು ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ಸ್ಮೃತಿ ಕಾಟನ್ಈಸ್ಕೂಲ್ ಅಭಿಯಾನವನ್ನು ಆರಂಭಿಸಿದ್ದಾರೆ, ಸ್ವತಃ ತಾವೇ ಕಾಟನ್ ಸೀರೆ ಉಟ್ಟ ಫೋಟೋವನ್ನು ಅಪೆಡೇಟ್ ಮಾಡಿ, ಇತರರೂ ಇದೇ ರೀತಿ ಮಾಡುವಂತೆ ಮನವಿ ಮಾಡಿದ್ದಾರೆ.
ನನ್ನ #CottonIsCool ಲುಕ್ ಮೂಲಕ ನಾನು ಭಾರತದ ಬೇಸಿಗೆ ಮತ್ತು ಕಾಟನ್ ಇಂಡಸ್ಟ್ರಿಯನ್ನು ಸಂಭ್ರಮಿಸುತ್ತೇನೆ, ನಿಮ್ಮ #CottonIsCool ಲುಕ್ ಯಾವುದು? ಎಂದು ಅವರು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಹಲವಾರು ಸಚಿವರು, ಕ್ರೀಡಾಪಟುಗಳು, ಜನಸಾಮಾನ್ಯರೂ ಸೇರಿದಂತೆ ಕಾಟನ್ ಉಡುಗೆ ತೊಟ್ಟ ಫೋಟೋ ಅಪ್ಡೇಟ್ ಮಾಡಿದ್ದಾರೆ. ಟ್ವಿಟರ್ನಲ್ಲಿ ಹ್ಯಾಶ್ಟಾಗ್ #CottonIsCool ಇದೀಗ ದೊಡ್ಡ ಟ್ರೆಂಡ್ ಸೃಷ್ಟಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.