ನವದೆಹಲಿ: ಸಾವಿರ ಕೋಟಿಯ ಬೇನಾಮಿ ಆಸ್ತಿ ವ್ಯವಹಾರದಲ್ಲಿ ಕೈವಾಡವಿರುವ ಆರೋಪದ ಹಿನ್ನಲೆಯಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಸಂಬಂಧಪಟ್ಟ ದೆಹಲಿ ಮತ್ತು ಹರಿಯಾಣಗಳಲ್ಲಿನ ಹಲವಾರು ಸ್ಥಳಗಳಿಗೆ ಮಂಗಳವಾರ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ.
ಮುಂಜಾನೆ 3 ಗಂಟೆಗೆ 100 ಅಧಿಕಾರಿಗಳನ್ನು ಒಳಗೊಂಡ ಆದಾಯ ತೆರಿಗೆ ಇಲಾಖೆಯು ದಾಳಿಗಳನ್ನು ನಡೆಸಿದೆ, 10 ಸರ್ಕಾರಿ ಕಛೇರಿಗಳಲ್ಲೂ ಶೋಧ ಕಾರ್ಯ ನಡೆಸಿದೆ.
ಯುಪಿಎ ಅವಧಿಯಲ್ಲಿ ರೈಲ್ವೇ ಸಚಿವರಾಗಿದ್ದ ವೇಳೆ ಲಾಲೂ ಅವರು ಬೇನಾಮಿ ಆಸ್ತಿ ವ್ಯವಹಾರ ನಡೆಸಿದ್ದರು ಎಂಬ ಆರೋಪವಿದೆ.
ಅವರ ಪುತ್ರ ಮಿಸಾ ಭಾರ್ತಿ ಅವರ ಹೆಸರಲ್ಲೂ ಬೇನಾಮಿ ಆಸ್ತಿ ಇದೆ ಎಂದು ಬಿಜೆಪಿ ಆರೋಪಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.