ವಾನ್ನಾಕ್ರೈ ರ್ಯಾನ್ಸಮ್ವೇರ್ ಸೈಬರ್ ಅಟ್ಯಾಕ್ ಜಾಗತಿಕವಾಗಿ ದೊಡ್ಡ ಭೀತಿಯನ್ನು ಸೃಷ್ಟಿಸಿದೆ. ಆದರೆ ಈ ಸೈಬರ್ ದಾಳಿಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಕೀರ್ತಿ ಬ್ರಿಟನ್ ಯುವ ಕಂಪ್ಯೂಟ್ ತಜ್ಞ ಮರ್ಕಸ್ ಹುಚಿನ್ಸ್ಗೆ ಸಲ್ಲುತ್ತದೆ. ಸದ್ಯಕ್ಕೆ ಈತ ಒಬ್ಬ ಹೀರೋನಂತೆ ಕಾಣುತ್ತಿದ್ದಾನೆ. ಆದರೆ ತನ್ನನ್ನು ತಾನು ಎಂದೂ ಹೀರೋ ಎಂದು ಪರಿಗಣಿಸದ ಈತ ಮಾಲ್ವೇರ್ ವಿರುದ್ಧ ಹೋರಾಟ ಮುಂದುವರೆಸಿದ್ದಾನೆ.
ಲಾಸ್ ಏಂಜಲೀಸ್ ಮೂಲದ ಕ್ರೈಪ್ಟೋಸ್ ಲಾಜಿಕ್ಸ್ನಲ್ಲಿ ಉದ್ಯೋಗ ಮಾಡುವ ಈತನ 150 ಮಂದಿಯ ತಂಡ 150 ದೇಶಗಳ ಕಂಪ್ಯೂಟರ್ಗೆ ದಾಳಿ ಮಾಡಿದ ವೈರಸ್ ವಿರುದ್ಧ ಹೋರಾಡಿದೆ.
ನಾನು ಹೀರೋ ಅಲ್ಲ, ಬಾಟ್ನೆಟ್ಸ್ ತಡೆಯಲು ನನ್ನಿಂದಾದ ಸಹಾಯ ಮಾಡಿದ್ದೇನೆ ಅಷ್ಟೇ ಅನ್ನುವ ಮರ್ಕಸ್, ಶುಕ್ರವಾರ ಏಕಾಏಕಿ ನಡೆ ಸೈಬರ್ ದಾಳಿಯ ತೀವ್ರತೆಯನ್ನು ಕಡಿಮೆ ಮಾಡುವ ಕಿಲ್ ಸ್ವಿಚ್ನ್ನು ಡಿಸ್ಕವರ್ ಮಾಡಿದ್ದಾರೆ. ಅಲ್ಲದೇ ಮತ್ತೆ ಮೂರು ದಿನಗಳ ಇದರ ವಿರುದ್ಧ ಹೋರಾಟ ನಡೆಸಿದ್ದಾರೆ.
ಮೈಕ್ರೋಸಾಫ್ಟ್ ವಿಂಡೋಸ್ನ ಹಳೆ ವಿಧಾನದಿಮದ ನಡೆಯುವ ಕಂಪ್ಯೂಟರ್ಗಳನ್ನು ವನ್ನಾಕ್ರೈ ದುರ್ಬಲಗೊಳಿಸಿದೆ. ಸರ್ವರ್ಗಳನ್ನು ಹಿಡಿದಿಟ್ಟುಕೊಟ್ಟ ಬಳಕೆದಾರರಿಂದ ೩೦೦ರಿಂದ ೬೦೦ ಡಾಲರ್ ನೀಡುವಂತೆ ಆಗ್ರಹಿಸಿದೆ. ಇಲ್ಲವಾದರೆ ಡಾಟಾವನ್ನು ಹಾಳುಗೆಡವುವ ಮತ್ತು ರಿಪೇರಿ ಮಾಡಲಗದ ಮಟ್ಟಕ್ಕೆ ಕೊಂಡೊಯ್ಯವ ಬೆದರಿಕೆ ಹಾಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.