ನವದೆಹಲಿ: ಆಧಾರ್ ಕಾರ್ಡ್ನ್ನು ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು ಈಗಾಗಲೇ ಹೇಳಲಾಗಿದ್ದು, ಆದಾಯ ತೆರಿಗೆ ಬಗ್ಗೆ ಮಾಹಿತಿ ಸಲ್ಲಿಸುವವರು ಇದನ್ನು ಕಡ್ಡಾಯವಾಗಿ ಮಾಡಬೇಕಾಗಿದೆ.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ಇದನ್ನು ಮಾಡಬೇಕಾಗಿತ್ತು. ಆದರೆ ಇದು ಎಲ್ಲರಿಗೂ ಸಾಧ್ಯವಾಗದ ಕಾರಣ ಮತ್ತು ಲಿಂಕ್ ಮಾಡುವ ಪ್ರಕ್ರಿಯೆ ಕ್ಲಿಷ್ಟಕರವಾದ ಹಿನ್ನಲೆಯಲ್ಲಿ ಆದಾಯ ತೆರಿಗೆ ಇಲಾಖೆಯು ಸರಳ ರೀತಿಯ ಇ-ಸೌಲಭ್ಯವನ್ನು ಜಾರಿಗೊಳಿಸಿದೆ.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ಸೈಟ್ನಲ್ಲಿ ಹೊಸ ಲಿಂಕ್ವೊಂದನ್ನು ನೀಡಲಾಗಿದ್ದು, ಇದರಲ್ಲಿ ಆಧಾರ್ ಕಾರ್ಡ್ನ್ನು ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡುವುದು ಬಹಳ ಸರಳ.
www.incometaxindiaefiling.gov.
ಯುಡಿಎಐನಿಂದ ಪರಿಶೀಲನೆ ನಡೆದ ಬಳಿಕ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಯಶಸ್ವಿಯಾಗಲಿದೆ.
ಒಂದು ವೇಳೆ ಹೊಂದಾಣಿಕೆಯಾಗದಿದ್ದರೆ ಆಧಾರ್ ಒಟಿಪಿ ಬೇಕಾಗುತ್ತದೆ. ಮಾಹಿತಿಗಳನ್ನು ನೀಡುವಾಗ ಸರಿಯಾಗಿ ಪರಿಶೀಲಿಸಿ ನಂತರ submit ಮಾಡಬೇಕು.
ಯಾರು ಬೇಕಾದರೂ ಆಧಾರ್ ಕಾರ್ಡ್ನ್ನು ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡಲು ಅನುಕೂಲವಾಗುವಂತೆ ಸರಳ ರೀತಿಯಲ್ಲಿ ಇದನ್ನು ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.