Tuesday, 20th February 2018
×
Home About Us Advertise With s Contact Us

ಕೇಳ್ತಾಜೆಯಲ್ಲಿ ಅಕ್ರಮ ಕಟ್ಟೆ ತೆರವು

ಬೆಳ್ತಂಗಡಿ: ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೇಳ್ತಾಜೆ ಎಂಬಲ್ಲಿ ಪರವಾನಿಗೆ ಪಡೆಯದೆ ನಾಮ ಫಲಕ ಅಳವಡಿಸಲು ನಿರ್ಮಿಸಿದ ಕಟ್ಟೆ ಹಾಗೂ ಅಕ್ರಮವಾಗಿ ಗೋರಿಯಂತೆ ನಿರ್ಮಿಸಲಾಗಿದ್ದನ್ನು ಎರಡು ಕಡೆಗಳಿಂದಲೂ ಬಂದ ದೂರಿನ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕು ಆಡಳಿತ ಪೋಲಿಸ್ ಬಂದೋ ಬಸ್ತುವಿನಲ್ಲಿ  ತೆರವುಗೊಳಿಸಿದೆ.

26dlVIVADHA1 copy

ಕೆಲ ತಿಂಗಳುಗಳಿಂದ ಕೇಳ್ತಾಜೆ ಸಮೀಪ ಅನಧಿಕೃತವಾಗಿ ನಿರ್ಮಿಸಿದ್ದ ಅಕ್ರಮ ಗೋರಿಯಂತೆ ನಿರ್ಮಿಸಿ, ಪತಾಕೆಯನ್ನು ಹಾಕಲಾಗಿದ್ದನ್ನು ತೆರವು ಗೊಳಿಸುವಂತೆ  ತಾಲೂಕು ಆಡಳಿತಕ್ಕೆ ಒಂದು ಕೋಮಿನವರು ಮನವಿ ಸಲ್ಲಿಸಿದ್ದರು. ಇದೀಗ ಕೇಳ್ತಾಜೆಯಲ್ಲಿ ಸುರ್ಯ, ಉಜಿರೆ ರಸ್ತೆಯ ನಾಮಫಲಕವನ್ನು ಅಳವಡಿಸಲು ಕಟ್ಟೆಯನ್ನು ಸಂಬಂಧಪಟ್ಟ ಇಲಾಖೆಗಳಿಂದ ಪರವಾನಿಗೆ ಪಡೆಯದೆ ನಿರ್ಮಿಸಲಾಗುತ್ತಿತ್ತು. ಇದರ ಬಗ್ಗೆ ಇನ್ನೊಂದು ಕೋಮಿನವರು ಆಕ್ಷೇಪಣೆ ಸಲ್ಲಿಸಿದ್ದರು.  ಎರಡು ಕಡೆಗಳಿಂದಲೂ ಸಂಬಂಧಪಟ್ಟ ಇಲಾಖೆಗಳಿಗೆ ದೂರುಗಳು ಹೋಗಿದ್ದವು. ಇದರಿಂದ ಶಾಂತಿ ಕದಡುವ ಮುನ್ನವೇ ಎಚ್ಚೆತ್ತುಕೊಂಡ ತಾಲೂಕಾಡಳಿತ ಕ್ರಮ ಕೈಗೊಂಡಿದೆ. ಕೇಳ್ತಾಜೆಯಲ್ಲಿ ರಸ್ತೆಯ ಬದಿಯಲ್ಲಿಯೇ ಇದ್ದ ಇವೆರಡನ್ನು ಲೋಕೋಪಯೋಗಿ  ಇಲಾಖೆಯ ಅಧಿಕಾರಿಗಳು , ಪೋಲೀಸರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರು.

ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸ. ಕಾರ್ಯನಿರ್ವಾಹಕ ಇಂಜಿನಿಯರ್ ಸುಭಾಶ್ಚಂದ್ರ, ಇಂಜಿನಿಯರ್ ತೌಸೀಫ್, ಕಂದಾಯ ನಿರೀಕ್ಷಕ ರವಿಕುಮಾರ್, ಗ್ರಾಮಕರಣಿಕ ರಾಘವೇಂದ್ರ, ಎಸ್‌ಐ ಪ್ರಕಾಶ್ ದೇವಾಡಿಗ, ಎಸ್‌ಐ ಮಾಧವ ಕೂಡ್ಲು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top