ವಾಷಿಂಗ್ಟನ್ : ಭಾರತದ ಯೋಧರ ಮೇಲೆ ದಾಳಿ ನಡೆಸಿದರೆ ಭಾರತವು ಖಂಡಿತಾ ಸುಮ್ಮನೆ ಇರುವುದಿಲ್ಲ. ಪಾಕಿಸ್ಥಾನವು ತನ್ನ ನೆಲದೊಳಗಿರುವ ಉಗ್ರರನ್ನು ಮಟ್ಟ ಹಾಕಬೇಕು ಎಂದು ಅಮೇರಿಕ ಹೌಸ್ ಡೆಮಾಕ್ರಟಿಕ್ ಕಾಕಸ್ ಸಂಸ್ಥೆಯ ನಿರ್ದೇಶಕರಾಗಿರುವ ಜೋ ಕ್ರೌವ್ಲಿ ಅವರು ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಪಾಕಿಸ್ಥಾನ ಭಾರತದ ಇಬ್ಬರು ಯೋಧರನ್ನು ಅಂಗಚ್ಛೇದ ಮಾಡಿದ ಪ್ರಕರಣಕ್ಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಜೋ ಕ್ರೌವ್ಲಿ, ತನ್ನ ಯೋಧರ ಮೇಲೆ ದಾಳಿಯಾದರೆ ಭಾರತವು ಸುಮ್ಮನೆ ಕೂರುವುದಿಲ್ಲ. ದಾಳಿ ಮಾಡಿದವರಿಗೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವಿನ ಗಡಿಯಲ್ಲಿನ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಪಾಕಿಸ್ಥಾನವು ತನ್ನ ಆಶ್ರಯದಲ್ಲಿರುವ ಭಯೋತ್ಪಾದಕ ಸಂಘಟನೆಗಳನ್ನು ಹತ್ತಿಕ್ಕಬೇಕು. ಅವರ ಅಡಗುತಾಣಗಳನ್ನು ನಾಶಪಡಿಸಬೇಕು ಎಂದಿದ್ದಾರೆ.
ಉಗ್ರರ ನೆಲೆಗಳನ್ನು ನಾಶಪಡಿಸುವಂತೆ ಟ್ರಂಪ್ ಸರ್ಕಾರವು ಪಾಕಿಸ್ಥಾನದ ಮೇಲೆ ಹೆಚ್ಚಿನ ಒತ್ತಡ ಹೇರುವಂತೆ ಜೋ ಕ್ರೌವ್ಲಿ ಅವರು ಒತ್ತಾಯಿಸಿದ್ದಾರೆ. ಒಂದೊಮ್ಮೆ ಹಿಂದೇಟು ಹಾಕಿದರೆ ಭಾರತವು ಉಗ್ರರ ನೆಲೆಗಳನ್ನು ನಾಶಪಡಿಸುವ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.