ಗುವಾಹಟಿ: ಅಸ್ಸಾಂನಲ್ಲಿ ಸರ್ಕಾರದಿಂದ ನಡೆಸಲ್ಪಡುವ ಜಿಲ್ಲಾ ಮತ್ತು ಗ್ರಾಮೀಣ ಆಸ್ಪತ್ರೆಗಳು ಇನ್ನು ಮುಂದೆ ರಕ್ತ ಪರೀಕ್ಷೆ, ಎಕ್ಸ್ ರೇ, ಸಿಟಿ ಸ್ಕ್ಯಾನ್ ಸೇರಿದಂತೆ ಇತರ ವೈದ್ಯಕೀಯ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಿವೆ. ದಿನದ 24 ಗಂಟೆಯೂ ಈ ಸೇವೆ ಲಭ್ಯವಿರಲಿದೆ.
ಅಸ್ಸಾಂನ ಆರೋಗ್ಯ ಸಚಿವ ಹಿಮಾಂತ ಬಿಸ್ವಾ ಶರ್ಮಾ ಅವರು ಈ ಬಗೆಗಿನ ಮಾಹಿತಿಯನ್ನು ವಿಧಾನಸಭೆಗೆ ನೀಡಿದ್ದು, ’60 ವಿಧದ ರಕ್ತ ಪರೀಕ್ಷೆ ಸೇರಿದಂತೆ ಇತರ ವೈದ್ಯಕೀಯ ಪರೀಕ್ಷೆಗಳನ್ನು ಉಚಿತಗೊಳಿಸುವ ಸಲುವಾಗಿ ಸರ್ಕಾರ ಶೀಘ್ರದಲ್ಲೇ ಮಸೂದೆ ತರಲಿದೆ. ಇದೇ ತಿಂಗಳು ಈ ಸೌಲಭ್ಯ ಜಾರಿಗೊಳ್ಳಲಿದೆ. ಇದಕ್ಕಾಗಿ ಖಾಸಗಿ ನರ್ಸಿಂಗ್ ಹೋಮ್ಗಳೊಂದಿಗೆ ಕೈಜೋಡಿಸಲಿದ್ದೇವೆ’ ಎಂದರು.
ಮೊದಲು 35 ಆಸ್ಪತ್ರೆಗಳಲ್ಲಿ ಈ ಸೇವೆಯನ್ನು ಆರಂಭಿಸಿ ಬಳಿಕ ಇತರ ಸಣ್ಣ ಆರೋಗ್ಯ ಕೇಂದ್ರಗಳಿಗೆ ವಿಸ್ತಯರಿಸಲಿದ್ದೇವೆ ಎಂದರು.
ವೈದ್ಯಕೀಯ ಪರೀಕ್ಷೆಗಳ ವೆಚ್ಚವನ್ನು ಭರಿಸಲು ಸಾಧ್ಯವಾಗದ ಬಡವರಿಗಾಗಿ ಸರ್ಕಾರ ಈ ಸೌಲಭ್ಯವನ್ನು ನೀಡುತ್ತಿದ್ದು, ಇದಕ್ಕಾಗಿ ಖಾಸಗಿ ಲ್ಯಾಬೋರೇಟರಿಗಳೊಂದಿಗೆ ಕೈಜೋಡಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.