ವಿಶ್ವಸಂಸ್ಥೆ: ಸ್ಥಿರ ಜಾಗತಿಕ ಹ್ಯುಮನ್ ಸೆಟ್ಲ್ಮೆಂಟ್ಸ್ಗಾಗಿ ಇರುವ ಸಂಸ್ಥೆ ಯುನ್-ಹ್ಯಾಬಿಟೇಟ್ ಮುಂದಿನ ಎರಡು ವರ್ಷಕ್ಕೆ ತನ್ನ ಅಧ್ಯಕ್ಷರನ್ನಾಗಿ ಭಾರತವನ್ನು ಅವಿರೋಧವಾಗಿ ಆಯ್ಕೆ ಮಾಡಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಇದರ ಆಡಳಿತ ಮಂಡಳಿಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲಿದ್ದಾರೆ.
ಯು-ಎನ್ ಹ್ಯಾಬಿಟೇಟ್ ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾಗಿದ್ದು, 1978ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಭಾರತ 1988 ಮತ್ತು 2007ರಲ್ಲೂ ಅಧ್ಯಕ್ಷತೆಯನ್ನು ಹೊಂದಿತ್ತು. ಇದೀಗ ಮತ್ತೊಮ್ಮೆ ಆ ಅವಕಾಶ ದೊರೆತಿದೆ.
ಕೇನ್ಯಾದ ನೈರೋಬಿಯಲ್ಲಿ ಯುನೆ ಹ್ಯಾಬಿಟೇಟ್ನ 58 ಸದಸ್ಯರುಗಳುಳ್ಳ ಆಡಳಿತ ಮಂಡಳಿಯ ಸಭೆ ನಡೆಯುತ್ತಿದ್ದು, ಇದರ ನೇತೃತ್ವವನ್ನು ನಾಯ್ಡು ವಹಿಸಿಕೊಳ್ಳಲಿದ್ದಾರೆ.
ನಾಯ್ಡು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಗಳನ್ನು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.