ಭವ್ನಗರ್: ದೊಡ್ಡ ಉದ್ಯಮಿಗಳು, ಸೆಲೆಬ್ರಿಟಿಗಳು, ಹಣವಂತರು ಚಾರಿಟಿ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ 84 ವರ್ಷದ ನಿವೃತ್ತ ಬ್ಯಾಂಕ್ ಉದ್ಯೋಗಿ ತಮ್ಮೆಲ್ಲಾ ಉಳಿತಾಯವನ್ನೂ ರಾಷ್ಟ್ರೀಯ ರಕ್ಷಣಾ ಫಂಡ್ಗೆ ದಾನ ಮಾಡಿದ್ದಾರೆ.
ಗುಜರಾತಿನ ಭವ್ನಗರದ ಜನಾರ್ಧನ್ ಭಟ್ ಮತ್ತು ಅವರ ಪತ್ನಿ ಜೀವಮಾನವಿಡೀ ಕಷ್ಟ ಪಟ್ಟು ಉಳಿತಾಯ ಮಾಡಿದ 1 ಕೋಟಿ ರೂಪಾಯಿಗಳನ್ನು ರಕ್ಷಣಾ ಫಂಡ್ಗೆ ನೀಡಿ ದೊಡ್ಡತನ ಮೆರೆದಿದ್ದಾರೆ.
ಜನಾರ್ಧನ್ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಕ್ಲರ್ಕ್ ಆಗಿದ್ದು, ಗಡಿಯಲ್ಲಿ ದೇಶಕ್ಕಾಗಿ ಹೋರಾಡುತ್ತಿರುವ ಯೋಧರನ್ನು ಅವರ ಸಂಕಷ್ಟಗಳನ್ನು ಕಂಡು ನೊಂದು ತಮ್ಮೆಲ್ಲಾ ಉಳಿತಾಯವನ್ನು ಅವರಿಗಾಗಿ ನೀಡಿದ್ದಾರೆ.
ಪಾಕಿಸ್ಥಾನದ ವಿರುದ್ಧ ಹೋರಾಡುತ್ತಿರುವ ನಮ್ಮ ಸೇನೆ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗೀ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡೆ ಎಂದು ಅವರು ಹೇಳಿದ್ದಾರೆ.
ಉತ್ತಮ ಉಳಿತಾಯ ಮತ್ತು ಬಂಡವಾಳ ಹೂಡಿಕೆಯಿಂದ ಇವರು ಉತ್ತಮ ಗಳಿಕೆಯನ್ನು ಮಾಡುತ್ತಿದ್ದಾರೆ. ತಮ್ಮ ಸಹೊದ್ಯೋಗಿಗಳ ಕಷ್ಟ ಪರಿಹಾರಕ್ಕೂ ಇವರು ೫೪ ಲಕ್ಷ ರೂಪಾಯಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.