×
Home About Us Advertise With s Contact Us

ಪ್ಲಾಸ್ಟಿಕ್ ಬಾಟಲ್‌ನಿಂದ ಟಾಯ್ಲೆಟ್ ಬೇಸಿನ್ ತಯಾರಿಸಿದ ವಿದ್ಯಾರ್ಥಿಗಳು

ವಿದ್ಯಾರ್ಥಿಗಳು ಅನಾರೋಗ್ಯ ಪೀಡಿತರಾಗಲು ಸ್ವಚ್ಛತೆಯಿಲ್ಲದಿರುವುದು ಕೂಡ ಒಂದು ಕಾರಣವಾಗಿರುತ್ತದೆ. ಶೌಚಾಲಯವಿಲ್ಲದೇ ಇರುವುದು ಅಥವಾ ಶೌಚಾಲಯ ಸಮರ್ಪಕವಾಗಿರದೇ ಇರುವುದು ಕೂಡ ಮಕ್ಕಳನ್ನು ಅನಾರೋಗ್ಯಕ್ಕೆ ದೂಡುತ್ತದೆ.

ಇಂತಹುದೇ ಸಮಸ್ಯೆಯನ್ನು ಎದುರಿಸುತ್ತಿದ್ದ ತಮಿಳುನಾಡಿನ ಕುರುಂಬಪಟ್ಟಿಯ ಪಂಚಾಯತ್ ಯೂನಿಯನ್ ಮಿಡ್ಲ್ ಸ್ಕೂಲ್ ಇದೀಗ ಟಾಯ್ಲೆಟ್ ಸಮಸ್ಯೆಯಿಂದ ಮುಕ್ತಿ ಕಂಡಿದೆ. ಇದಕ್ಕೆ ಕಾರಣ ಅದೇ ಶಾಲೆಯ ವಿದ್ಯಾರ್ಥಿಗಳು.

ಸ್ಥಳಿಯ ಸಂಸ್ಥೆ ‘ಡಿಸೈನ್ ಟು ಚೇಂಜ್’ ಉತ್ತೇಜನದ ಮೇರೆಗೆ ಈ ಶಾಲೆಯಲ್ಲಿ ಓದುತ್ತಿರುವ 13 ವರ್ಷದ ವಯಸ್ಸಿನವರಾದ ಸುಪಿಕ್‌ಪಾಂಡಿಯನ್, ಸಂತೋಷ್, ದಿಯಾನಿತಿ, ರಾಗುಲ್ ಮತ್ತು ಪ್ರಭಾಹರನ್ ಎಂಬ ವಿದ್ಯಾರ್ಥಿಗಳು 20 ಲೀಟರ್ ನ ವೇಸ್ಟ್ ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಸಿ ಟಾಯ್ಲೆಟ್ ಬೇಸಿನ್‌ಗಳನ್ನು ತಯಾರಿಸಿದ್ದಾರೆ.

ಅತ್ಯಂತ ಅಗ್ಗದಲ್ಲಿ ತಯಾರಾಗುವ ಈ ಪ್ಲಾಸ್ಟಿಕ್ ಬೇಸಿನ್‌ಗಳನ್ನೇ ಇದೀಗ ಶಾಲೆಯಲ್ಲಿ ಅಳವಡಿಸಲಾಗಿದೆ. ಇದರಿಂದ ಶಾಲೆಯ ಹುಡುಗರ ಶೌಚಾಲಯದ ಸಮಸ್ಯೆ ಅತೀ ಕಡಿಮೆ ವೆಚ್ಚದಲ್ಲೇ ಸರಿಹೋಗಿದೆ.

ಈ ಬೇಸಿನ್‌ಗಳನ್ನು ತಯಾರಿಸಿದ ವಿದ್ಯಾರ್ಥಿಗಳಿಗೆ ಡಿಸೈನ್ ಟು ಚೇಂಜ್  ಸಂಸ್ಥೆ ನೀಡುವ ‘ಐ ಕ್ಯಾನ್ ಡು ಅವಾರ್ಡ್’ನಲ್ಲಿ ‘ಬೋಲ್ಡೆಸ್ಟ್ ಐಡಿಯಾ’ ಅವಾರ್ಡ್‌ನ್ನು ಪಡೆದುಕೊಂಡಿದೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top
error: Content is protected !!