ಲಂಡನ್: ಭಾರತೀಯ ಮೂಲದ 7 ವರ್ಷದ ಪುಟಾಣಿ ಬಾಲಕನೊಬ್ಬ ಯುಕೆಯಲ್ಲಿನ ಯೋಗ ಚಾಂಪಿಯನ್ಶಿಪ್ ಸ್ಪರ್ಧೆಯನ್ನು ಸತತ ಎರಡನೇ ಬಾರಿಗೆ ಗೆದ್ದುಕೊಂಡಿದ್ದಾನೆ.
ಎಪ್ರಿಲ್ 22ರಂದು ಲಂಡನ್ನಲ್ಲಿ ಯುನೈಡೆಟ್ ಕಿಂಗ್ಡಮ್ ನ್ಯಾಷನಲ್ ಯೋಗ ಚಾಂಪಿಯನ್ಶಿಪ್ ನಡೆದಿದ್ದು, ಯುಕೆ ಯೋಗ ಸ್ಪೋರ್ಟ್ಸ್ ಫೆಡರೇಶನ್ ಇದನ್ನು ಆಯೋಜನೆ ಮಾಡಿತ್ತು.
ಈ ಸ್ಪರ್ಧೆಯಲ್ಲಿ ಭಾರತೀಯ ಮೂಲದ 7 ವರ್ಷದ ಈಶ್ವರ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾನೆ. ಲಂಡನ್ನ ಸೈಂಟ್ ಮೈಕಲ್ಸ್ ಸ್ಕೂಲ್ನಲ್ಲಿ ಓದುತ್ತಿರುವ ಈತ ಕಳೆದ ವರ್ಷವೂ ಈ ಚಾಂಪಿಯನ್ಶಿಪ್ ಪಡೆದುಕೊಂಡಿದ್ದ. ಈತನನ್ನು ಗ್ಲೋಬಲ್ ಯೋಗ ಮ್ಯಾಗಜೀನ್ ಯಂಗೆಸ್ಟ್ ವಂಡರ್ ಬಾಯ್ ಎಂದು ಕರೆದಿದೆ.
ಈ ವರ್ಷದ ಜೂನ್ನಲ್ಲಿ ನೇಪಾಳದಲ್ಲಿ ನಡೆಯಲಿರುವ ವರ್ಲ್ಡ್ ಯೋಗ ಚಾಂಪಿಯನ್ಶಿಪ್ನಲ್ಲಿ ಈತ ಗ್ರೇಟ್ ಬ್ರಿಟನ್ನ್ನು ಪ್ರತಿನಿಧಿಸಲಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.