ಪೇಶಾವರ: 20 ವರ್ಷಗಳ ನಂತರ ಪಾಕಿಸ್ಥಾನದ ಹಿಂದೂಗಳಿಗೀಗ ಶಿವ ದೇವಾಲಯವೊಂದರ ಪೂಜೆ ಮಾಡುವ ಅವಕಾಶ ಸಿಕ್ಕಿದೆ.
ಅಬ್ಬೊತ್ತಾಬಾದ್ ಜಿಲ್ಲೆಯ ಶಿವ ದೇವಾಲಯವೊಂದರ ಆಸ್ತಿ ವಿಚಾರ ಕೋರ್ಟ್ ಮೆಟ್ಟಿಲೇರಿದ ಪರಿಣಾಮ, ಶಿವದೇವಾಲಯದಲ್ಲಿ ಪೂಜೆಯೇ ನಡೆಯುತ್ತಿರಲಿಲ್ಲ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಪೇಶಾವರ ಹೈಕೋರ್ಟ್, ದೇವಸ್ಥಾನದಲ್ಲಿ ಪೂಜೆಗೆ ಅವಕಾಶ ನೀಡಿದೆ. 2013ರಲ್ಲಿ ಹಿಂದುಗಳ ಸರ್ಕಾರೇತರ ಸಂಘಟನೆಯೊಂದು ಈ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೊರೆ ಹೋಗಿತ್ತು.
ದೇವಸ್ಥಾನಕ್ಕೆ ಅಂದಾಜು 175 ವರ್ಷಗಳಷ್ಟು ಪುರಾತನ ಇತಿಹಾಸವಿದೆ. ಇದು ಮೊದಲು ಬ್ರಿಟಿಷರ ವಶದಲ್ಲಿತ್ತು. ಹಿಂದೂ ಸೈನಿಕರು ಪೂಜೆ ಮಾಡಬಾರದೆಂಬ ಉದ್ದೇಶ ಬ್ರಿಟೀಷರದ್ದಾಗಿತ್ತಂತೆ.
1947ರ ವಿಭಜನೆಯ ನಂತರ ಇದನ್ನು ಬಲ್ ಮೈಕ್ ಸಭಾ ತನ್ನ ವಶಕ್ಕೆ ಪಡೆದಿತ್ತು. ಅಬ್ಬೊತ್ತಾಬಾದ್ ಬೋರ್ಡ್ ಮಂದಿರದ ಸಮೇತ ಎಲ್ಲ ಸಂಪತ್ತನ್ನೂ ತನ್ನ ವಶಕ್ಕೆ ಪಡೆದಿತ್ತು.
ಇದೀಗ ಪೇಶಾವರ ಹೈಕೋರ್ಟ್ ನ್ಯಾಯಾಲಯದ ತೀರ್ಪಿನಿಂದ ಅಲ್ಲಿನ ಹಿಂದೂಗಳಿಗೆ ಮತ್ತೆ ಶಿವಪೂಜೆಯ ಅವಕಾಶ ದೊರೆತಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.