ವಾಷಿಂಗ್ಟನ್: ಪಾಕಿಸ್ಥಾನದಲ್ಲಿ ಮರಣದಂಡನೆ ಶಿಕ್ಷೆಗೆ ಒಳಗಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ರಕ್ಷಿಸುವ ಸಲುವಾಗಿ ಡೊನಾಲ್ಡ್ ಟ್ರಂಪ್ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಅಮೆರಿಕಾದಲ್ಲಿನ ಅನಿವಾಸಿ ಭಾರತೀಯರು ವೈಟ್ಹೌಸ್ ಪಿಟಿಷನ್ ಆರಂಭಿಸಿದ್ದಾರೆ.
ವೈಟ್ಹೌಸ್ ವೆಬ್ಸೈಟ್ನಲ್ಲಿ ‘ವಿ ದಿ ಪಿಟಿಷನ್ ‘ನ್ನು ಆರಂಭಿಸಲಾಗಿದ್ದು, ಜಾಧವ್ ವಿರುದ್ಧದ ಬೇಹುಗಾರಿಕೆ ಆರೋಪ ಅಪ್ಪಟ ಸುಳ್ಳು ಎಂದು ಅದು ಹೇಳಿದೆ.
ಅಲ್ಲದೇ ಟ್ರಂಪ್ ಆಡಳಿತದ ಪ್ರತಿಕ್ರಿಯೆಯನ್ನು ಪಡೆಯಲು ಮೇ 14ರೊಳಗೆ 100,000 ಸಹಿಗಳನ್ನು ಪಡೆಯುವ ಅಗತ್ಯ ಈ ಪಿಟಿಷನ್ಗಿದೆ.
ಜಾಧವ್ ಅವರನ್ನು ಸಂಪರ್ಕಿಸಲು ಭಾರತೀಯ ರಾಯಭಾರಿಗೆ ಅವಕಾಶ ನೀಡದೇ ಇರುವುದು ಪಾಕಿಸ್ಥಾನ ಜಾಧವ್ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ಮರಣದಂಡನೆ ಶಿಕ್ಷೆ ವಿಧಿಸಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಅದು ಹೇಳಿದೆ.
ಟ್ರಂಪ್ ಅವರು ವಿನಂಬ್ರವಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಜಾಧವ್ ಅವರಿಗೆ ಮರಣದಂಡನೆಯಾಗದಂತೆ ನೋಡಿಕೊಳ್ಳಬೇಕು ಎಂದು ಪಿಟಿಷನ್ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.