ನವದೆಹಲಿ: ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರ ಅನುಷ್ಠಾನಕ್ಕೆ ತಂದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಎನ್ಎಚ್ಡಿಪಿ)ಗೆ ಅನುಗುಣವಾದ ಮತ್ತೊಂದು ಬೃಹತ್ ರಸ್ತೆ ಯೋಜನೆಯನ್ನು ಅನುಷ್ಠಾನಗೊಳಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ.
ರಸ್ತೆಗಳಿಗೆ ‘ಭಾರತ್ಮಾಲಾ’ ಎಂಬ ಅಂಬ್ರುಲ್ಲಾ ಯೋಜನೆಯನ್ನು ತರಲು ಕೇಂದ್ರ ಮುಂದಾಗಿದೆ. ಇದು ಮೋದಿ ಸರ್ಕಾರದ ಮೆಗಾ ಪ್ರಾಜೆಕ್ಟ್ ಆಗಲಿದ್ದು, 10 ಲಕ್ಷ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಎನ್ಎಚ್ಡಿಪಿ ಬಳಿಕದ ಭಾರತದ ಅತೀದೊಡ್ಡ ಹೈವೇ ಯೋಜನೆಯಿದು ಎಂದು ಪರಿಗಣಿಸಲಾಗಿದೆ. ಎನ್ಎಚ್ಡಿಪಿಯಡಿ ಸುಮಾರು 50 ಸಾವಿರ ಕಿಲೋ ಮೀಟರ್ ಹೆದ್ದಾರಿಗಳು ಜಾಗತಿಕ ಗುಣಮಟ್ಟದ ಅಭಿವೃದ್ಧಿ ಕಂಡಿವೆ.
ಮಹಾತ್ವಕಾಂಕ್ಷೆಯ ಭಾರತ್ಮಾಲಾ ಯೋಜನೆಯ ಮೊದಲ ಹಂತಕ್ಕೆ ಸಾರ್ವಜನಿಕ ಬಂಡವಾಳ ಮಂಡಳಿ(ಪಿಐಬಿ)ಯ ಕ್ಲಿಯರೆನ್ಸ್ ಪಡೆಯಲು ಸರ್ಕಾರ ಮುಂದಾಗಿದೆ.
ಮೊದಲ ಹಂತದಲ್ಲಿ 5.35 ಲಕ್ಷ ಕೋಟಿ ವೆಚ್ಚದಲ್ಲಿ 29,000 ಕಿ.ಮೀ ಹೈವೇ ನೆಟ್ವರ್ಕ್ ನಿರ್ಮಿಸಲಾಗುತ್ತದೆ. ಎಕನಾಮಿಕ್ ಕಾರಿಡಾರ್, ಕರಾವಳಿ ಮತ್ತು ಇತರ ರಸ್ತೆಗಳನ್ನು ಇದು ಒಳಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.