Tuesday, 20th February 2018
×
Home About Us Advertise With s Contact Us

ಸಬ್ಸಿಡಿ ಅಡುಗೆ ಅನಿಲ ತೊರೆಯುವಂತೆ ಸಿರಿವಂತರಿಗೆ ಮೋದಿ ಮನವಿ

modiನವದೆಹಲಿ: ಆರ್ಥಿಕವಾಗಿ ಸಬಲರಾಗಿರುವವರು ಸಬ್ಸಿಡಿ ಅಡುಗೆ ಅನಿಲ ಬಳಸುವುದನ್ನು ನಿಲ್ಲಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ 2022ರ ವೇಳೆಗೆ ಇಂಧನ ಆಮದನ್ನು ಶೇ.10ರಷ್ಟು ಕಡಿತಗೊಳಿಸಬೇಕು ಎಂದು ನಮ್ಮ ಸರ್ಕಾರ ತೀರ್ಮಾನಕೈಗೊಂಡಿದೆ ಎಂದರು.

ಪೈಪ್ಡ್ ಕುಕ್ಕಿಂಗ್ ಗ್ಯಾಸ್ ಕನೆಕ್ಷನನ್ನು ಮುಂದಿನ ನಾಲ್ಕು ವರ್ಷಗಳಲ್ಲಿ  ಪ್ರಸ್ತುತ ಇರುವ 27 ಲಕ್ಷದಿಂದ ಒಂದು ಕೋಟಿ ಮನೆಗಳಿಗೆ ವಿಸ್ತರಿಸುವ ತೈಲ ಕಂಪನಿಗಳ ಯೋಜನೆಯನ್ನು ಪ್ರಸ್ತಾಪಿಸಿದ ಅವರು, 2.8 ಲಕ್ಷ ಗ್ರಾಹಕರು ತಮ್ಮ ಸಬ್ಸಿಡಿ ಅಡುಗೆ ಅನಿಲವನ್ನು ತೊರೆದರೆ ರೂ.100 ಕೋಟಿ ಉಳಿತಾಯವಾಗಲಿದೆ ಎಂದರು.

‘2.8ಲಕ್ಷ ಮಂದಿ ತಮ್ಮ ಸಬ್ಸಿಡಿ ಅಡುಗೆ ಅನಿಲವನ್ನು ತೊರೆಯುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂಧಿಸಿದ್ದಾರೆ. ಇದರಿಂದ ರೂ.100ಕೋಟಿ ಉಳಿತಾಯವಾಗಲಿದೆ.  ಈ 100 ಕೋಟಿಯನ್ನು ಬಡವರ ಏಳಿಗೆಗಾಗಿ ಬಳಸಿಕೊಳ್ಳಬಹುದು’ ಎಂದರು.

ಅಲ್ಲದೇ ಸರ್ಕಾರ ಅಡುಗೆ ಅನಿಲಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್ ಯೋಜನೆಯನ್ನು ಘೋಷಿಸಿದ ಬಳಿಕ ಹಲವರು ತಮ್ಮ ಸಬ್ಸಿಡಿ ಅಡುಗೆ ಅನಿಲವನ್ನು ತೊರೆಯಲು ನಿರ್ಧರಿಸಿದ್ದಾರೆ ಎಂದರು.

ಜನಧನ್ ಯೋಜನೆಯಡಿ ಇದುವರೆಗೆ 12 ಕೋಟಿ ಬ್ಯಾಂಕ್ ಅಕೌಂಟ್‌ಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top