ನವದೆಹಲಿ: ಅತಿ ದುಬಾರಿ ಬೆಲೆಯ ಬ್ರಾಂಡೆಡ್ ಔಷಧಿಗಳ ಬದಲು ಜನರಿಕ್ ಔಷಧಿಗಳನ್ನು ವೈದ್ಯರು ರೋಗಿಗಳಿಗೆ ಶಿಫಾರಸ್ಸು ಮಾಡುವಂತೆ ನಿಯಮಗಳನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಜಾರಿಗೆ ತರಲಿದೆ.
ಜನರಿಕ್ ಔಷಧಿಗಳ ದರ ಕಡಿಮೆಯಾಗಿದ್ದು, ಬಡ ರೋಗಿಗಳು ಇದನ್ನು ಸುಲಭವಾಗಿ ಖರೀದಿ ಮಾಡಬಹುದು ಎಂಬ ಉದ್ದೇಶದಿಂದ ಈ ನಿಯಮ ಜಾರಿಗೊಳಿಸಲು ಮೋದಿ ನಿರ್ಧರಿಸಿದ್ದಾರೆ.
ಸೂರತ್ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ್ದ ಮೋದಿ, ವೈದ್ಯರು ರೋಗಿಗಳಿಗೆ ಅರ್ಥವಾಗದ ಕೈಬರಹದಲ್ಲಿ ಔಷಧಿಗಳನ್ನು ಬರೆಯುತ್ತಾರೆ ಮತ್ತು ಖಾಸಗಿ ಮೆಡಿಕಲ್ನಲ್ಲಿ ಅತಿ ದುಬಾರಿ ಬೆಲೆಗೆ ರೋಗಿಗಳು ಔಷಧಿ ಖರೀದಿಸುವಂತೆ ಮಾಡುತ್ತಾರೆ. ಬಡ ರೋಗಿಗಳಿಗೆ ಈ ಔಷಧಿಗಳನ್ನು ಖರೀದಿ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಜನರಿಕ್ ಔಷಧಿಗೆ ಶಿಫಾರಸ್ಸು ಮಾಡಲು ವೈದ್ಯರಿಗೆ ನಿಮಯಗಳನ್ನು ಜಾರಿಗೊಳಿಸುವುದಕ್ಕೆ ಬ್ರಾಂಡೆಡ್ ಔಷಧಿ ಕಂಪನಿಗಳು ವಿರೋಧ ವ್ಯಕ್ತಪಡಿಸುತ್ತಿವೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.