ನವದೆಹಲಿ: 16 ಬಾರಿ ವಿಶ್ವ ಚಾಂಪಿಯನ್ ಆಗಿರುವ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಇದೀಗ ತಮ್ಮ ಏಳನೇ ಏಷ್ಯನ್ ಟೈಟಲ್ನ್ನು ಗೆದ್ದುಕೊಂಡಿದ್ದಾರೆ.
ಶುಕ್ರವಾರ ನಡೆದ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ಪ್ರತಿಸ್ಪರ್ಧಿ ಸೌರವ್ ಕೊಟ್ಟಾರಿ ಅವರನ್ನು 6-3ರಿಂದ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.
ಇದು ಅವರ ಆರನೇ ಏಷ್ಯನ್ ಬಿಲಿಯರ್ಡ್ಸ್ ವಿಜಯವಾಗಿದ್ದು, ಏಳನೇ ಓವರ್ ಆಲ್ ಏಷ್ಯನ್ ಚಾಂಪಿಯನ್ಶಿಪ್ ಆಗಿದೆ.
ಪಂಕಜ್ ಅವರು 6 ರೆಡ್ ಸ್ನೂಕರ್ ಟೈಟಲ್ಗಳನ್ನೂ ಜಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.