ಬೆಂಗಳೂರು: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ಹಂಚಿಕೆ ಮಾಡುವಲ್ಲಿ ಹೊಸ ವಿಧಾನವನ್ನು ಅನುಸರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಪುಸ್ತಕಗಳನ್ನು ಪ್ರಿಂಟ್ ಮಾಡಲು ಬೇಕಾದ ಕಚ್ಛಾವಸ್ತುಗಳ ಕೊರತೆ ಎದುರಿಸುತ್ತಿರುವ ಸರ್ಕಾರ 2017-18ರ ಶೈಕ್ಷಣಿಕ ವರ್ಷದಲ್ಲಿ 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳನ್ನು ಎರಡು ಭಾಗಗಳನ್ನಾಗಿಸಲು ನಿರ್ಧರಿಸಿದೆ.
ತಲಾ ಒಂದು ಸಬ್ಜೆಕ್ಟ್ಗೆ ಎರಡು ಪಠ್ಯಪುಸ್ತಕಗಳನ್ನು ಹೊರತಂದು ಎರಡು ಹಂತದಲ್ಲಿ ಅದನ್ನು ವಿತರಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.
‘ಸಂಪೂರ್ಣ ಕಚ್ಛಾ ವಸ್ತುಗಳು ಕೈಸೇರುವ ತನಕ ಕಾಯಲು ಸಾಧ್ಯವಿಲ್ಲ, ಇದರಿಂದ ಪಠ್ಯಪುಸ್ತಕ ವಿತರಣಾ ಪ್ರಕ್ರಿಯೆ ವಿಳಂಬವಾಗುತ್ತದೆ. 6 ಕೋಟಿ ಪುಸ್ತಕ ಪ್ರಿಂಟ್ ಆಗಬೇಕು. ಹೀಗಾಗಿ ಎರಡು ಭಾಗಗಳಾಗಿ ಪಠ್ಯಪುಸ್ತಕ ಪ್ರಿಂಟ್ ಮಾಡುತ್ತಿದ್ದೇವೆ’ ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಮೊದಲ ಭಾಗ ಜೂನ್ನಿಂದ ಸಪ್ಟೆಂಬರ್ವರೆಗೆ ಬೋಧಿಸಲಾಗುವ ಪಾಠವನ್ನು ಹೊಂದಲಿದೆ, ಎರಡನೇ ಭಾಗ ನವೆಂಬರ್ನಿಂದ ಮಾರ್ಚ್ವರೆಗೆ ಬೋಧಿಸಲಾಗುವ ಪಾಠವನ್ನು ಹೊಂದಲಿದೆ ಎಂದಿದ್ದಾರೆ.
ಪುಟಗಳ ಸಂಖ್ಯೆ ಕಡಿಮೆಯಾಗುವುದರಿಂದ ಮಕ್ಕಳ ಪುಸ್ತಕದ ಹೊರೆಯೂ 3 ಕೆ.ಜಿವರೆಗೆ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.