ಪಾಟ್ನಾ: ವರದಕ್ಷಿಣೆ ಪದ್ಧತಿಯನ್ನು ತೀವ್ರವಾಗಿ ಖಂಡಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ವರದಕ್ಷಿಣೆ ಪಡೆಯುವ ಮದುವೆಗಳಿಗೆ ಹೋಗದಂತೆ ಜನರಿಗೆ ಕರೆ ನೀಡಿದ್ದಾರೆ.
ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮ ಜಯಂತಿಯ ಅಂಗವಾಗಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ವರದಕ್ಷಿಣೆ ಪಡೆಯಲಾಗಿದೆ ಎಂಬುದು ನಿಮಗೆ ತಿಳಿದು ಬಂದರೆ ಅಂತಹ ಮದುವೆಗಳಿಗೆ ಹೋಗಲೇ ಬೇಡಿ’ ಎಂದಿದ್ದಾರೆ.
ನಮ್ಮ ಮಾರ್ಗದಿಂದ ವರದಕ್ಷಿಣೆಯನ್ನು ನಾವು ಕಿತ್ತು ಹಾಕಲೇ ಬೇಕು ಎಂದಿರುವ ನಿತೀಶ್, ಬಾಲ್ಯ ವಿವಾಹದ ವಿರುದ್ಧ ಕಿಡಿಕಾರಿದರು. ಅಲ್ಲದೇ ಸಾಮಾಜಿಕ ಪಿಡುಗುಗಳಿಂದ ಅಂತರ ಕಾಯ್ದುಕೊಳ್ಳುವಂತೆ ಕರೆ ನೀಡಿದರು.
ಅಪೌಷ್ಠಿಕತೆ ಮತ್ತು ಅನಾರೋಗ್ಯಗಳಿಗೆ ಬಾಲ್ಯವಿವಾಹಗಳೂ ಕಾರಣವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಿದ ಅವರು, ಹಿಂದುಳಿದ ವರ್ಗದವರು ತಮ್ಮನ್ನು ತಾವು ಶಿಕ್ಷಿತರನ್ನಾಗಿಸಬೇಕು, ಇದರಿಂದ ಸಂವಿಧಾನ ಅವರಿಗೆ ನೀಡುವ ಹಕ್ಕುಗಳ ಬಗ್ಗೆ ಅವರಿಗೆ ತಿಳುವಳಿಕೆ ಬರುತ್ತದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.