ಬೆಳಗಾವಿ: ಸಂವಿಧಾನಶಿಲ್ಪಿ ಡಾ.ಅಂಬೇಡ್ಕರ್ ಚಿತ್ರವನ್ನು ಯುವಜನತೆ ತಮ್ಮ ತಲೆಯಲ್ಲಿ ಮೂಡಿಸಿಕೊಳ್ಳುತ್ತಿರುವುದು ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ.
ಅಂಬೇಡ್ಕರ್ ಜಯಂತಿ ನಿಮಿತ್ತ ಇಲ್ಲಿನ ಕಾಕತಿವೇಸ್ನಲ್ಲಿರುವ ಕಿರಣ್ ಮೆನ್ಸ್ ಪಾರ್ಲರ್ನಲ್ಲಿ ಅಭಿಮಾನಿಗಳ ದಂಡೇ ಸೇರುತ್ತಿದೆ. ತಮ್ಮ ತಲೆಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಚಿತ್ರವನ್ನು ಮೂಡಿಸುವಂತೆ ಕೇಳುತ್ತಿದ್ದು, ತಮ್ಮ ಅಭಿಮಾನವನ್ನು ವ್ಯಕ್ತಗೊಳಿಸುತ್ತಿದ್ದಾರೆ.
ಕಿರಣ್ ಮೆನ್ಸ್ ಪಾರ್ಲರ್ನ ಕಿರಣ ಅವರ ಕಲೆಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಕೈಚಳಕದ ಪರಿಣಾಮ ಯುವಕರ ತಲೆ ಮೇಲೆ ಸಂವಿಧಾನ ಶಿಲ್ಪಿ ರಾರಾಜಿಸುತ್ತಿದ್ದಾರೆ.
ಅಂಬೇಡ್ಕರ್ ಜಯಂತಿ ನಿಮಿತ್ತ ಕೆಲವು ದಿನಗಳಿಂದ 100ಕ್ಕೂ ಹೆಚ್ಚು ಅಭಿಮಾನಿಗಳು ತಮ್ಮ ತಲೆಯಲ್ಲಿ ಅಂಬೇಡ್ಕರ್ ಚಿತ್ರವನ್ನು ಬಿಡಿಸಿಕೊಂಡಿದ್ದಾರಂತೆ. ವಿಶೇಷ ಎಂದರೆ ಕಿರಣ್ ಅವರು, ಈ ರೀತಿ ತಲೆಯಲ್ಲಿ ಚಿತ್ರ ತೆಗೆಯಲು ಒಂದು ತಿಂಗಳಿಂದ ನಿರಂತರ ಅಭ್ಯಾಸ ಮಾಡಿದ್ದರಂತೆ. ಬಾಬಾ ಸಾಹೇಬರ ಬಗ್ಗೆ ಅವರಿಗೂ ಎಲ್ಲಿಲ್ಲದ ಅಭಿಮಾನವಂತೆ.
ಕ್ರಿಕೆಟ್ ಸ್ಟಾರ್, ಸಿನಿಮಾ ಸ್ಟಾರ್ಗಳಂತೆ ಹೇರ್ಸ್ಟೈಲ್ ಮಾಡಿಸಿಕೊಂಡ ಹುಡುಗರನ್ನು ಕಂಡಿದ್ದೆವು. ಇದೀಗ ಮೇಧಾವಿ, ಸಂವಿಧಾನ ಶಿಲ್ಪಿಯ ಚಿತ್ರವನ್ನು ತಲೆ ಮೇಲೆ ಮೂಡಿಸಿಕೊಂಡಿದ್ದು ವಿಶೇಷ. ಬಾಬಾ ಸಾಹೇಬರ ಚಿತ್ರದಂತೆ ಅವರ ಆದರ್ಶಗಳೂ ಯುವಜನತೆಯ ತಲೆಯಲ್ಲಿ ಹೋದರೆ, ಉತ್ತಮ ಸಮಾಜ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.