Tuesday, 20th February 2018
×
Home About Us Advertise With s Contact Us

ಭಾರತ ಸೋತಿದಕ್ಕೆ ಅತೀವ ಸಂತಸವಾಗಿದೆ ಎಂದ ವರ್ಮಾ!

vermaನವದೆಹಲಿ: ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್‌ನಲ್ಲಿ ಭಾರತ ತಂಡ ಮುಗ್ಗರಿಸಿರುವುದಕ್ಕೆ ಇಡೀ ಭಾರತೀಯರು ಬೇಸರದಲ್ಲಿದ್ದಾರೆ. ಆದರೆ ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಮಾತ್ರ ಭಾರತ ಸೋತಿದಕ್ಕೆ ನಾನು ಅತೀವ ಸಂತಸದಲ್ಲಿದ್ದೇನೆ ಎಂದು ಹೇಳಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ.

‘ಭಾರತ ಸೋತಿದಕ್ಕೆ ನಾನು ಅತೀವ ಸಂಸತಪಡುತ್ತೇನೆ ಏಕೆಂದರೆ ನಾನು ಕ್ರಿಕೆಟನ್ನು ದ್ವೇಷಿಸುತ್ತೇನೆ. ಕ್ರಿಕೆಟ್ ಅಭಿಮಾನಿಗಳನ್ನು ಅದಕ್ಕಿಂತಲೂ ಹೆಚ್ಚು ದ್ವೇಷಿಸುತ್ತೇನೆ’

‘ನಾನು ನನ್ನ ದೇಶವನ್ನು ಅತೀವ ಪ್ರೀತಿಸುತ್ತೇನೆ. ಅದೇ ಕಾರಣಕ್ಕಾಗಿ ಕ್ರಿಕೆಟನ್ನು ದ್ವೇಷಿಸುತ್ತೇನೆ. ಕ್ರಿಕೆಟ್ ಈ ದೇಶದ ಜನರನ್ನು ಉತ್ಪಾದನಾ ರಹಿತರನ್ನಾಗಿ ಮಾಡುತ್ತಿದೆ. ಇಲ್ಲಿನ ಜನ ದುಡಿಯುವುದನ್ನು ಬಿಟ್ಟು ಕ್ರಿಕೆಟ್ ನೋಡಲಾರಂಭಿಸುತ್ತಾರೆ’

‘ಈ ದೇಶದ ಜನರನ್ನು ಕ್ರಿಕೆಟ್ ಎಂಬ ಮಹಾಮಾರಿಯಿಂದ ಗುಣಪಡಿಸುವಂತೆ ಈ ದೇಶದ ಎಲ್ಲಾ ದೇವರಗಳಲ್ಲಿಯೂ ನಾನು ಪ್ರಾರ್ಥಿಸುತ್ತೇನೆ’

‘ಭಾರತ ತಂಡವನ್ನು ಪದೇ ಪದೇ ಸೋಲಿಸಿ. ಅವರು ಆಟವಾಡುವುದನ್ನು ನಿಲ್ಲಿಸುವ ತನಕ ಸೋಲಿಸಿ ಎಂದು ಇತರ ದೇಶಗಳ ತಂಡಗಳಿಗೆ ನಾನು ಮನವಿ ಮಾಡಿಕೊಳ್ಳುತ್ತೇನೆ’ ಎಂದು ವರ್ಮಾ ಸಾಲು ಸಾಲು ಟ್ವಿಟ್‌ಗಳನ್ನು ಮಾಡಿದ್ದಾರೆ.

ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತನ್ನ ಅಸಮಾಧಾನವನ್ನು ಟ್ವಿಟರ್ ಮೂಲಕವೇ ಹೊರಹಾಕಿದ್ದಾರೆ.

‘ಪ್ರತಿಬಾರಿಯೂ ನಿಮ್ಮ ಸಿನಿಮಾ ಅಷ್ಟೊಂದು ಅಭೂತಪೂರ್ವ ಯಶಸ್ಸುಗಳಿಸುತ್ತಿರುವುದಲ್ಲಿ ಯಾವುದೇ ಆಶ್ಚರ್ಯವಿಲ್ಲ’ ಎಂದು ಒಮರ್ ಟ್ವೀಟ್ ಮಾಡಿದ್ದಾರೆ.

ಸಾಲು ಸಾಲು ಫ್ಲಾಪ್ ಚಿತ್ರಗಳನ್ನು ನೀಡುತ್ತಿರುವ ವರ್ಮಾ ಅವರಿಗೆ ಒಮರ್ ಒಳ್ಳೆಯ ಪ್ರತ್ಯುತ್ತರವನ್ನೇ ನೀಡಿದ್ದಾರೆ. ತನ್ನ ಕುಸಿಯುತ್ತಿರುವ ಖ್ಯಾತಿಯನ್ನು ಮೇಲೆತ್ತುವ ಸಲುವಾಗಿ ವರ್ಮಾ ಇಂತಹ ಟ್ವೀಟ್‌ಗಳನ್ನು ಮಾಡುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ರಿಕೆಟ್ ನೋಡುವುದರಿಂದ ಜನ ಉತ್ಪಾದನಾ ರಹಿತರಾಗುತ್ತಾರೆ ಎಂದಾದರೆ ಇವರ ಕೆಲಸಕ್ಕೆ ಬಾರದ ಸಿನಿಮಾಗಳನ್ನು ನೋಡಿದರೂ ಜನ ನಿರರ್ಥಕರಾಗುತ್ತಾರಲ್ಲವೇ. ಹೀಗಾಗೀ ಇವರ ಸಿನಿಮಾಗಳನ್ನು ಜನ ಪದೇ ಪದೇ ಸೋಲಿಸಲಿ. ಇವರು ಸಿನಿಮಾ ಮಾಡುವುದನ್ನು ನಿಲ್ಲಿಸುವ ತನಕ ಸೋಲಿಸಲಿ ಎಂಬುದು ದೇಶಾಭಿಮಾನಿಗಳ ಪ್ರಾರ್ಥನೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top