ಇಡುಕ್ಕಿ: ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸ್ವಯಂ-ನಿರ್ಮಿತ ಆವಿಷ್ಕಾರಗಳನ್ನು ಮಾಡುವಲ್ಲಿ ಭಾರತ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ಪ್ರಮುಖವಾಗಿ ಐಐಟಿ ಕ್ಷೇತ್ರದಲ್ಲಿರುವ ವೃತ್ತಿಪರರು ಒಂದು ವಸ್ತುವಿನ ಅಭಿವೃದ್ಧಿ ಅಥವಾ ಸಂಶೋಧನೆ ಮಾಡುವುದನ್ನು ನಾವು ಕಾಣಬಹುದು.
ಕೇರಳದ ಇಡುಕ್ಕಿ ಜಿಲ್ಲೆಯ ಡಿ. ಸದಾಶಿವನ್ (54), ಇತ್ತೀಚೆಗೆ ಬಿಡಿ ಭಾಗಗಳು ಮತ್ತು ಮರುಬಳಕೆ ವಸ್ತುಗಳನ್ನು ಬಳಸಿ ಅತಿ ಹಗುರದ 2-ಸೀಟರ್ ಹೆಲಿಕಾಪ್ಟರ್ನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದ್ದಾರೆ.
ಸದಾಶಿವನ್ ಕೇವಲ 10ನೇ ತರಗತಿ ವರೆಗೆ ಮಾತ್ರ ಅಧ್ಯಯನ ನಡೆಸಿರುವುದು ಅವರು ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆಯಲು ಕಾರಣವಾಗಿದೆ.
ಕಳೆದ ವರ್ಷ ದಿವ್ಯಾಂಗ ವ್ಯಕ್ತಿಯಾಗಿರುವ ಸಜಿ ಥಾಮಸ್ ಅವರು ಸಣ್ಣ ವಿಮಾನವೊಂದನ್ನು ತಯಾರಿಸಿ ಹಾರಾಟ ನಡೆಸಿದ್ದು ಸದಾಶಿವನ್ ಅವರು ಈ ಹೆಲಿಕಾಪ್ಟರ್ ತಯಾರಿಸಲು ಸ್ಫೂರ್ತಿಯಾಗಿದೆ. ಇಂಜಿನಿಯರಿಂಗ್ ವರ್ಕ್ಶಾಪ್ ನಡೆಸುತ್ತಿರುವ ಸದಾಶಿವನ್ ತಮ್ಮ ಮನೆ ವಠಾರದಲ್ಲಿ ಚಾಪರ್ ತಯಾರಿಸಿದ್ದಾರೆ.
ಇದನ್ನು ತಯಾರಿಸಲು 4 ವರ್ಷ ತಗುಲಿದ್ದು, ಸದಾಶಿವನ್ ತಮ್ಮ ಮಗಳ ಶಾಲಾ ಪ್ರಾಶುಪಾಲರ ಮನವಿಯಂತೆ ಶಾಲೆಯಲ್ಲಿ ಪ್ರದರ್ಶನಕ್ಕೆ ಇಡಲು ಸದಾಶಿವನ್ ಈ ಹೆಲಿಕಾಪ್ಟರ್ ತಯಾರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.