ನವದೆಹಲಿ: ಕೇಂದ್ರ ಸರ್ಕಾರ ‘ಉಡಾನ್’ ಅಥವಾ ಉಡೇ ದೇಶ್ ಕಾ ನಾಗರಿಕ್ ಯೋಜನೆಯಡಿ ದೇಶೀಯ ವಿಮಾನಯಾನ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ. ಇದು ದೇಶೀಯ ಪ್ರಯಾಣವನ್ನು ಉತ್ತೇಜಿಸುವ ವಿಸ್ತೃತ ಪ್ರದೇಶಿಕ ವಾಯುಯಾನದ ಭಾಗವಾಗಿದೆ.
ಉಡಾನ್ ಯೋಜನೆದಯಡಿಯಲ್ಲಿ ಶೇ. 50ರಷ್ಟು ಸೀಟುಗಳಿಗೆ ರೂ.2,500 ದರ ಇರಲಿದೆ. ಇದು 500 ಕಿ.ಮೀ. ಒಳಗಿನ, 1 ಗಂಟೆ ಅವಧಿಯ ಪ್ರಯಾಣಕ್ಕೆ ಅನ್ವಯವಾಗಲಿದೆ.
ಈ ಯೋಜನೆ ನಗರಗಳಿಗೆ ಪ್ರಯಾಣಿಸುವ ಮಧ್ಯಮ ವರ್ಗ ಅಲ್ಲದೇ ಉದ್ಯಮಿಗಳಿಗೂ ಟೈಯರ್-2 ನಗರಗಳಿಗೆ ಅಗ್ಗದ ದರಗಳ ಪ್ರಯಾಣಕ್ಕೆ ಸಹಾಯಕವಾಗಲಿದೆ. ಇದು ಭಾರತದ ದೇಶೀಯ ಹೂಡಿಕೆಗೆ ಲಾಭದಾಯಕವಾಗಿರಲಿದೆ. ಇದು ಕೇಂದ್ರ ಸರ್ಕಾರದ ಸಬ್ಸಿಡಿ ಯೋಜನೆಯಡಿಯಲ್ಲಿ ಮುಂದುವರೆಯಲಿದೆ ಎಂದು ಸರ್ಕಾರ ತಿಳಿಸಿದೆ.
ಇನ್ನು ಉಡಾನ್ ಯೋಜನೆಯಡಿ ಬರುವ ಪ್ರವಾಸಿ ತಾಣಗಳೆಂದರೆ ಆಗ್ರಾ, ಶಿಮ್ಲಾ, ಪುದುಚೇರಿ, ಜೈಸಲ್ಮೇರ್, ಪೋರ್ಬಂದರ್, ದಿಯು, ಮೈಸೂರು, ಶಿಲ್ಲಾಂಗ್, ಕುಲ್ಲು, ಗ್ವಾಲಿಯರ್ ಹಾಗೂ ಪಂತ್ನಗರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.