ಬರ್ಲಿನ್: ಇಂಡೋ-ಜರ್ಮನ್ ಉದ್ಯಮ ಸಂಬಂಧಗಳ ಅಸಾಧಾರಾಣ ಯೋಜನೆಯಾಗಿರುವ ಮೇಕ್ ಇನ್ ಇಂಡಿಯಾ ಮಿಟ್ಟೆಲ್ಸ್ಟ್ಯಾಂಡ್ (ಎಂಐಐಎಂ) ಯೋಜನೆಗೆ ಜರ್ಮನ್ ಸರ್ಕಾರ ಬರ್ಲಿನ್ನ ಭಾರತೀಯ ರಾಯಭಾರವನ್ನು ಶ್ಲಾಘಿಸಿದೆ.
ಭಾರತದಲ್ಲಿ ಜರ್ಮನ್ ಕಂಪೆನಿಗಳ ಹೂಡಿಕೆಗೆ ಎರಡೂ ಸರ್ಕಾರಗಳ ಪ್ರಯತ್ನಗಳ ಒಂದು ಪರಿಪೂರ್ಣ ಯೋಜನೆ ಇದಾಗಿದೆ ಎಂದು ಜರ್ಮನಿ ಹೇಳಿದೆ.
ಮೇಕ್ ಇನ್ ಇಂಡಿಯಾ ಮಿಟ್ಟೆಲ್ಸ್ಟ್ಯಾಂಡ್ನ 3ನೇ ವಿನಿಮಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜರ್ಮನಿಯ ಸಂಯುಕ್ತ ಸಹಕಾರ ಮತ್ತು ಶಕ್ತಿ ಹಾಗೂ ಸಂಸದೀಯ ರಾಜ್ಯ ಕಾರ್ಯದರ್ಶಿ ಓವ್ ಬೆಕ್ಮೆಯೆರ್ ಜರ್ಮನ್ ಎಸ್ಎಂಇಗಳ ಹೂಡಿಕೆಗೆ ಅನುಕೂಲವಾಗುವ ಎಮ್ಐಐಎಮ್ ಯೋಜನೆಯನ್ನು ಶ್ಲಾಘಿಸಿದರಲ್ಲದೇ ಈ ಯೋಜನೆಗೆ ಜರ್ಮನ್ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.
ಎಮ್ಐಐಎಮ್ ಭಾರತದಲ್ಲಿ 650 ಮಿಲಿಯನ್ ಯೋರೋ ಹೂಡಿಕೆನ್ನು ಘೋಷಿಸಿದ್ದು ಭಾರತದಲ್ಲಿ ಸುಮಾರು 4000 ಉದ್ಯೋಗವನ್ನು ಸೃಷ್ಟಿಸಿದೆ.
ಈ ಯೋಜನೆ ಪ್ರಸ್ತುತ ಭಾರತದಲ್ಲಿ 72 ಜರ್ಮನ್ ಎಸ್ಎಂಇಗಳ ಮಾರುಕಟ್ಟೆ ಪ್ರವೇಶಕ್ಕೆ ಅನುಕೂಲ ಮಾಡಿದೆ. ಈ 72 ಜರ್ಮನ್ ಕಂಪೆನಿಗಳಲ್ಲಿ 41 ಕಂಪೆನಿಗಳು ಪ್ರಸ್ತುತ ಭಾತದಲ್ಲಿ ಹೂಡಿಕೆಗೆ ಮುಂದಾಗಿವೆ.
ಭಾರತದ ಬರ್ಲಿನ್ ರಾಯಭಾರ ಕಚೇರಿಯಲ್ಲಿ ೩ನೇ ವಿನಿಮಯ ವೇದಿಕೆಯಲ್ಲಿ ಎಮ್ಐಐಎಮ್ ಕಾರ್ಯಕ್ರದ ಫಲಿತಾಂಶಗಳನ್ನು ಪ್ರಕಟಿಸಲಾಯಿತು.
ಜರ್ಮನ್ ಮಿಟ್ಟೆಲ್ಸ್ಟ್ಯಾಂಡ್ (ಎಸ್ಎಂಇ) ಕಂಪೆನಿಗಳ ಹೂಡಿಕೆಗೆ ಅನುಕೂಲವಾಗುವ ಎಮ್ಐಐಎಮ್ ಯೋಜನೆಯನ್ನು ಭಾರತೀಯ ರಾಯಭಾರ ಸೆಪ್ಟೆಂಬರ್ 2015ರಲ್ಲಿ ಆರಂಭಿಸಿತ್ತು. ಈ ಯೋಜನೆ ಕೈಗಾರಿಕಾ ನೀತಿ ಮತ್ತು ಪ್ರಚಾರ (ಡಿಐಪಿಪಿ) ಹಾಗೂ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ಬೆಂಬಲದೊಂದಿಗೆ ನಡೆಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.