ನವದೆಹಲಿ: ಇತ್ತೀಚೆಗೆ ಏಕೈಕ ರಾಕೆಟ್ ಬಳಸಿ ೧೦೪ ಉಪಗ್ರಹಗಳನ್ನು ಉಡಾವಣೆಯ ಐತಿಹಾಸಿಕ ಸಾಧನೆಯ ನಂತರ ಇದೀಗ ಭಾರತೀಯ ಉಪಗ್ರಹ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಅತ್ಯಂತ ಭಾರದ ರಾಕೆಟ್ GSLV-MkIII ಉಡಾವಣೆಗೆ ಸಿದ್ಧವಾಗಿದೆ.
ವರದಿಗಳ ಪ್ರಕಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಂದಿನ ಎರಡು ತಿಂಗಳುಗಳಲ್ಲಿ ಎರಡು ಉಪಗ್ರಹಗಳ ಉಡಾವಣೆಗೆ ಸಿದ್ಧಗೊಂಡಿದೆ. ಅದರಲ್ಲಿ ಇಸ್ರೋದ ಮುಂದಿನ ಪೀಳಿಗೆಯ GSLV-MkIII ರಾಕೆಟ್ ೩.೨ ಟನ್ ತೂಕದ ಜಿಸ್ಯಾಟ್-19 ಉಪಗ್ರಹವನ್ನು ಹೊತ್ತೊಯ್ಯಲಿದೆ.
ಬಾಹ್ಯಾಕಾಶ ಸಂಸ್ಥೆ ಮುಂದಿನ ಮಾರ್ಚ್, ಎಪ್ರಿಲ್ ತಿಂಗಳಿನಲ್ಲಿ GSLV-MkIII ಮತ್ತು GSLV-MkII ಬಿಡುಗಡೆ ಮಾಡಲು ಉದ್ದೇಶಿಸಿದೆ ಎಂದು ತಿರುವನಂತಪುರಂನ ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಕೆ. ಶಿವನ್ ಹೇಳಿದ್ದರು.
ಇಸ್ರೋ 2017ರ ಎರಡನೇ ತ್ರೈಮಾಸಿಕದಲ್ಲಿ ಮೊದಲ ಅಭಿವೃದ್ಧಿಯುತ ವಿಮಾನ ತಯಾರಿಸುವ ಯೋಜನೆ ಹೊಂದಿದೆ ಎಂದು ಪ್ರಧಾನಿ ಸಚಿವಾಲಯದ ರಾಜಯ ಸಚಿವ ಜಿತೇಂದ್ರ ಸಿಂಗ್ ಲೋಕ ಸಭೆಗೆ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.