ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಕ್ಷೇತ್ರದಲ್ಲಿನ ಸಮಸ್ಯೆಗಳು ಮತ್ತು ಕುಂದುಕೊರತೆಗಳನ್ನು ನಿವಾರಿಸಲು ಸಮಗ್ರ ಸಾಮಾಜಿಕ ಮಾಧ್ಯಮ ವೇದಿಕೆ ಎಂಒಪಿಎನ್ಜಿ ಇ-ಸೇವೆ (MOPNG e-Seva)ಯನ್ನು ಪ್ರಾರಂಭಿಸಿದೆ.
ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಈ ಸೇವೆಗೆ ಶುಕ್ರವಾರ ಚಾಲನೆ ನೀಡಿದ್ದಾರೆ.
ಇದು ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ ಉಪಕ್ರಮದ ಅಡಿಯಲ್ಲಿ ಒಂದು ದೈತ್ಯ ನಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಪಹಲ್ ಯೋಜನೆ, ಸಹಜ್ ಪಿಎಂಯುವೈ ನಂತರ ಎಂಒಪಿಎನ್ಜಿ ಇ-ಸೇವೆ ಒಂದು ಕಲ್ಯಾಣ ಯೋಜನೆಯಾಗಿದೆ.
ಈ ಪೋರ್ಟಲ್ ಗ್ರಾಹಕರು ಸಾಮಾಜಿಕ ಮಾಧ್ಯಮದಲ್ಲಿ ತೈಲ ಮತ್ತು ಅನಿಲ ವಲಯದ ಕುಂದುಕೊರತೆಗಳನ್ನು ಮತ್ತು ಪ್ರತಿಕ್ರಿಯೆ ನೀಡಬಹುದಾದ ಸಿಂಗಲ್ ಪಾಯಿಂಟ್ ಇಂಟರ್ಫೇಸ್ ಆಗಿದೆ. ಇದು ಗ್ರಾಹಕರಿಗೆ 24×7 ಸೇವೆ ನೀಡಲಿದೆ.
ಇ-ಸೇವಾ ಪೋರ್ಟಲ್ ಟ್ವಿಟರ್ ಮತ್ತು ಫೇಸ್ಬುಕ್ಗಳಲ್ಲಿ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದು, ಕಾಲಕ್ರಮೇಣ ಇತರ ಸಾಮಾಜಿಕ ವೇಇಕೆಗಳಲ್ಲಿ ಕಾರ್ಯನಿರ್ವಹಿಸಲಿದೆ. ನೈಜ ಸಮಯದ ಆಧಾರದ ಮೇಲೆ ಪರಿಹಾರ ಒದಗಿಸಲು ತೈಲ ಕಂಪೆನಿಗಳು ಮತ್ತು ಅಲೈಡ್ ಸೇವೆಗಳು ನೋಡಲ್ ಅಧಿಕಾರಿಗಳ ತಂಡವನ್ನು ರಚಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.