ಯಾವ ಉದ್ದೇಶದಿಂದ ಈ ಜಗತ್ತಿಗೆ ಬಂದಿದ್ದೇವೆಯೋ ಆ ಉದ್ದೇಶ ಈಡೇರಿದಾಗ ಮಾತ್ರ ಬದುಕು ಪೂರ್ಣಗೊಳ್ಳಲಿದೆ. ಈ ಉದ್ದೇಶ ಈಡೇರಿಕೆಗೆ ಸಾಧನೆ ಬೇಕು.
ಒಂದು ಸಣ್ಣ ಬಳ್ಳಿಯು ಹೂ ಕೊಡುವುದೇ ಅದರ ಉದ್ದೇಶ. ಹೂವನ್ನು ಕೊಟ್ಟಾಗಲೇ ಅದರ ಜೀವನ ಪೂರ್ಣ, ಕೊಡದಿದ್ದರೆ ಜೀವನ ಅಪೂರ್ಣ. ಹಾಗೆಯೇ, ಮನುಷ್ಯರು ಒಂದೊಂದು ಬಳ್ಳಿ ಇದ್ದಂತೆ. ಕೆಲವು ವರ್ಷಗಳ ಕಾಲ ಬೆಳೆಯುತ್ತೇವೆ. ಕೊನೆಗೆ ಒಂದು ಫಲವನ್ನು ಕೊಡಬೇಕು. ಯಾವ ಫಲವನ್ನು ಕೊಡಬೇಕೋ ಅದನ್ನು ಕೊಟ್ಟರೆ ಮಾತ್ರ ಜೀವನ ಸಾರ್ಥಕ ಆಗುತ್ತದೆ. ಫಲ ನೀಡಲು ಸಾಧನೆ ಮಾಡಬೇಕಾಗುತ್ತದೆ.
ಜಗತ್ತಿಗೆ ಏತಕ್ಕಾಗಿ ಬಂದಿದ್ದೇವೆ ಎಂಬುದನ್ನು ಪ್ರತಿಯೊಬ್ಬರು ತಮ್ಮ ಮನಸ್ಸಿಗೆ ಕೇಳಿಕೊಳ್ಳಬೇಕು. ನಾವು ಬಂದ ಸತ್ಯವನ್ನು ಅರಿಯಬೇಕು. ಅದನ್ನು ಅದ್ಭುತ ಸಾಧನೆ ಮಾಡಿದ ಮಹಾತ್ಮರು ಅರವಿಂದ ಮಹರ್ಷಿಗಳು ಅರಿತಿದ್ದರು. ಜೀವನ ಸತ್ಯದ ಅರಿವಾದರೆ ಮಾತ್ರ ಮನಸ್ಸು ಮುಕ್ತ, ನಿಶ್ಚಿಂತವಾಗುತ್ತದೆ. ಹೀಗೆ ಆಸೆಗಳಿಂದ ಮುಕ್ತವಾಗುವ ಪರಮೋನ್ನತಿ ಪಡೆಯಬೇಕು. ಜೀವನಾನಂದದ ಅನುಭವ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ಒಂದೊಂದು ದಿವ್ಯತೆ ಇದೆ. ದಿವ್ಯತೆ ಅನುಭವಿಸಿದಾಗ ಜೀವನ ಸಾರ್ಥಕ ಆಗಲಿದೆ. ಭಯ, ಆತಂಕಗಳಿಂದ ಮುಕ್ತವಾಗಿರುವಂತೆ ಮನಸ್ಸು ವಿಕಸಿತಗೊಳಿಸಲು ಸಾಧನೆ ಮಾಡಬೇಕಾಗುತ್ತದೆ. ಆ ಸಾಧನೆಯೇ ಸದ್ಭಾವ ಸಾಧನ.
ಹೃದಯದ ಒಳಗಿರುವ ಭಾವನೆ ಬೆಳೆಸುವುದೇ ಸಾಧನೆ. ಭಾವ ಯಾವಾಗಲೂ ಸೂಕ್ಷ್ಮವಾಗಿರುತ್ತದೆ. ವಿಚಾರಗಳು ಮತ್ತು ಭಾವ ಬೇರೆ. ಭಾವ ತೀರಾ ಸೂಕ,. ಅದನ್ನು ಸರ್ಶಿಸಲು, ತೂಗಲು ಹಾಗೂ ಅಳೆಯಲು ಬರೋದಿಲ್ಲ. ಅದು ನಮ್ಮೊಳಗಿದೆ. ಇದು ಇರುವುದರಿಂದಲೇ ಮನುಷ್ಯನಾಗಿದ್ದು, ಇಲ್ಲದಿದ್ದರೆ ನಾವು ಯಂತ್ರಗಳು. ಭಾವ ಇಲ್ಲದಿದ್ದರೆ ಜೀವನಕ್ಕೆ ಅರ್ಥವೇ ಇಲ್ಲ. ನಾನು, ನನ್ನದು ಎಂಬುದು ಭಾವ.
ಜೀವನದಲ್ಲಿ ಪ್ರತಿಯೊಂದು ವಸ್ತು, ವ್ಯಕ್ತಿಯನ್ನು ಸಾವಧಾನದಿಂದ ಗುರುತಿಸಿ ಗೌರವಿಸಿದಾಗಲೇ ಜೀವನಕ್ಕೆ ಅರ್ಥ ಬರುತ್ತದೆ. ವಿವಾಹ ಆಗುವ ಮುಂಚೆಯೇ ಬೇರೆ. ನಂತರದ ಜೀವನವೇ ಬೇರೆ. ಆದ್ದರಿಂದ ವಿವಾಹದ ಸಂದರ್ಭದಲ್ಲಿ ಸ್ವಾಮಿಗಳು ಸಾವಧಾನ ಎಂದು ಹೇಳುತ್ತಾರೆ. ಅಂದರೆ, ಇನ್ಮುಂದೆ ತುಂಬ ಎಚ್ಚರವಾಗಿರು ಎಂದರ್ಥ.