×
Home About Us Advertise With s Contact Us

2 ಸಾವಿರ ಶಸ್ತ್ರಧಾರಿ ಜಿಹಾದಿಗಳು ಭಾರತ ಪ್ರವೇಶಿಸಿದ್ದಾರೆ: ಬಾಂಗ್ಲಾ

terrorನವದೆಹಲಿ: ಪೂರ್ವ ಗಡಿಯ ಮೂಲಕ ಅಪಾರ ಸಂಖ್ಯೆಯ ಉಗ್ರರು ಭಾರತವನ್ನು ನುಸುಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಾಂಗ್ಲಾ ನೀಡಿದೆ.

ಬಾಂಗ್ಲಾದ ಗಡಿಯಿಂದ ಸುಮಾರು 2 ಸಾವಿರ ಹಿಜಿಲ್ ಮತ್ತು ಜೆಎಂಬಿ ಉಗ್ರರರು ಭಾರತಕ್ಕೆ ನುಸುಳಿದ್ದು, ಅವರೆಲ್ಲ ಪಶ್ಚಿಮಬಂಗಾಳ, ಅಸ್ಸಾಂ, ತ್ರಿಪುರದಲ್ಲಿ ಅವಿತಿರುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಗೃಹಸಚಿವಾಲಯಕ್ಕೆ ಬಾಂಗ್ಲಾ ಸರ್ಕಾರ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.

ಒಳನುಸುಳುವಿಕೆಯ ಸಂಖ್ಯೆಯಲ್ಲೂ ಗಣನೀಯ ಹೇರಿಕೆಯಾಗಿದೆ ಎಂದು ಬಾಂಗ್ಲಾದ ವರದಿ ತಿಳಿಸಿದೆ.

2014ರ ಅಕ್ಟೋಬರ್‌ನಲ್ಲಿ ನಡೆದ ಬುರ್ದ್ವಾನ್ ಸ್ಪೋಟದಲ್ಲಿ ಜೆಎಂಬಿ ಉಗ್ರರ ಕೈವಾಡವಿದೆ ಎಂಬುದನ್ನು ರಾಷ್ಟ್ರೀಯ ತನಿಖಾ ದಳ ಪತ್ತೆ ಹಚ್ಚಿತ್ತು.

ಬಾಂಗ್ಲಾದ ವರದಿಯ ಹಿನ್ನಲೆಯಲ್ಲಿ ರಕ್ಷಣಾ ಪಡೆಗಳು ಅಲರ್ಟ್ ಆಗಿದ್ದು, ಬಾಮಗ್ಲಾ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಿವೆ.

Leave a Reply

Your email address will not be published. Required fields are marked *

 

 

 

 

 

 

 

 

 

Recent News

Back To Top
error: Content is protected !!