ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಗಿಲ್ಗಿಟ್-ಬಲ್ತಿಸ್ಥಾನ್ ಪ್ರದೇಶವನ್ನು ತನ್ನ 5ನೇ ಪ್ರಾಂತ್ಯವೆಂದು ಘೋಷಿಸಲು ಮುಂದಾಗಿರುವ ಪಾಕಿಸ್ಥಾನಕ್ಕೆ ಅಲ್ಲಿನ ಜನರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಪಾಕ್ ನಿರ್ಧಾರವನ್ನು ವಿರೋಧಿಸಿ ನೂರಾರು ಸಂಖ್ಯೆಯ ವಕೀಲರು ರಸ್ತೆಗಿಳಿದು ಪ್ರತಿಭಟಿಸಿದ್ದಾರೆ. ನಮ್ಮ ನೆಲವನ್ನು ಚೀನಾ-ಪಾಕಿಸ್ಥಾನ ಎಕನಾಮಿಕ್ ಕಾರಿಡಾರ್ಗೆ ಬಳಸುವುದಕ್ಕಾಗಿ ನವಾಝ್ ಶರೀಫ್ ಕೈಗೊಂಡಿರುವ ಕರಾಳ ನಿರ್ಧಾರ ಇದು ಎಂದು ಇವರು ಆರೋಪಿಸಿದ್ದಾರೆ.
‘ಬಚ್ಚ ಬಚ್ಚ ಕಟ್ಟ ಮೆರೇಗಾ, ಪರ್ ಯೆ ಸಬ್ ನಹಿ ಬನೇಗ’( ಪ್ರತಿ ಮಕ್ಕಳೂ ಸಾಯುತ್ತೇವೆ ಆದರೆ ಗಿಲ್ಗಿಟ್-ಬಲ್ತಿಸ್ಥಾನ್ ಸ್ಟೇಟಸ್ ಬದಲಾಗಲು ಬಿಡೆವು) ಎಂದು ಘೋಷಣೆಗಳನ್ನು ಹಾಕಿದ್ದಾರೆ.
ಕಾಶ್ಮೀರ ಪ್ರತ್ಯೇಕತಾವಾದಿಗಳೂ ನವಾಝ್ ಶರೀಫ್ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.