ನ್ಯೂಯಾರ್ಕ್: ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಭಾರತ ವಿಶ್ವದಲ್ಲೇ ನಾಲ್ಕನೇ ಅತ್ಯಧಿಕ ಶತಕೋಟ್ಯಾಧಿಪತಿಗಳಿಗೆ ನೆಲೆಯಾಗಿದ್ದು, ಭಾರತ 101 ಬಿಲಿಯನೇರ್ಸ್ಗಳಿಗೆ ನೆಲೆಯಾಗಿದೆ. ಭಾರತ ಮೊದಲ ಬಾರಿ 100ಕ್ಕೂ ಹೆಚ್ಚು ಶ್ರೀಮಂತರನ್ನು ಹೊಂದಿದೆ.
ಜಗತ್ತಿನಾದ್ಯಂತ ಶತಕೋಟ್ಯಾಧಿಪತಿಗಳ ಸಂಖ್ಯೆ ಶೇ.13ರಷ್ಟು ಏರಿಕೆಯೊಂದಿಗೆ 1,810ರಿಂದ 2,043ಕ್ಕೆ ತಲುಪಿದೆ.
ಭಾರತದ 101 ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅಗ್ರಸ್ಥಾನದಲ್ಲಿದ್ದಾರೆ.
ರಿಲಯನ್ಸ್ನ ಮುಖೇಶ್ ಅಂಬಾನಿ ಅವರು 23.2 ಬಿಲಿಯನ್ ಡಾಲರ್ನೊಂದಿಗೆ ಭಾರತದ ಅತ್ಯಂತ ಶ್ರೀಮಂತರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಜಾಗತಿಕವಾಗಿ 33ನೇ ಸ್ಥಾನ ಪಡೆದಿದ್ದಾರೆ.
ಸ್ಟೀಲ್ ಕಂಪೆನಿಯ ಉದ್ಯಮಿ ಲಕ್ಷ್ಮೀ ಮಿತ್ತಲ್ 16.4 ಬಿಲಿಯನ್ ಡಾಲರ್ನೊಂದಿಗೆ ಎರಡನೇ ಶ್ರೀಮಂತ ಭಾರತೀಯ ಎನಿಸಿಕೊಂಡರೆ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ಜಿ 14.9 ಬಿಲಿಯನ್ನೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.
ಲಕ್ಷ್ಮೀ ಮಿತ್ತಲ್ ಜಾಗತಿಕವಾಗಿ 56ನೇ ಸ್ಥಾನ ಪಡೆದಿದ್ದಾರೆ. ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ಜಿ 72ನೇ ಸ್ಥಾನದಲ್ಲಿದ್ದಾರೆ.
ಅಲ್ಲದೇ ನಾಲ್ವರು ಭಾರತೀಯ ಮಹಿಳೆಯರೂ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಸಾವಿತ್ರಿ ಜಿಂದಾಲ್ 5.2 ಬಿಲಿಯನ್ ನಿವ್ವಳ ಲಾಭದೊಂದಿಗೆ ಜಾಗತಿಕವಾಗಿ 303ನೇ ಸ್ಥಾನದಲ್ಲಿದ್ದಾರೆ. ಗೋದ್ರೇಜ್ನ ಸ್ಮಿತಾ ಕೃಷ್ಣ 814ನೇ ಮತ್ತು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ 973ನೇ ಸ್ಥಾನದಲ್ಲಿದ್ದಾರೆ. ಡಯಾಬಿಟಿಸ್ ಮತ್ತು ಹೃದಯ ರೋಗಗಳ ಔಷಧಿ ತಯಾರಕ ಕಂಪೆನಿ ಯುಎಸ್ವಿ ಇಂಡಿಯಾದ ಅಧ್ಯಕ್ಷೆ ಲೀನಾ ತಿವಾರಿ 1030ನೇ ಸ್ಥಾನದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.